Important
Trending

ಅಪರಿಚಿತ ವಾಹನ ಡಿಕ್ಕಿ: ಭಿಕ್ಷುಕಿ ಸ್ಥಳದಲ್ಲೇ ಸಾವು

ಅತಿವೇಗ ತಂದ ಅವಾಂತರ

ಭಟ್ಕಳ:  ಅಪರಿಚಿತ ವಾಹನವೊಂದು ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ಥ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೈಲೂರು ಕ್ರಾಸ್ ಸಮೀಪ ನಡೆದಿದೆ. ಸ್ನೇಹಿತನೊಂದಿಗೆ ವೈಯಕ್ತಿಕ ಕೆಲಸದ ನಿಮಿತ್ತ ಹೊನ್ನಾವರಕ್ಕೆ ಹೋಗಿ ಮರಳಿ ಬರುವ ವೇಳೆ ರಾಷ್ಟ್ರೀಯ ಹೆದ್ದಾರಿ 66 ಬೈಲೂರು ಕ್ರಾಸ್ ಸಮೀಪ ಒಂದು ಬದಿಯಲ್ಲಿ ಸುಮಾರು 35 ರಿಂದ 40 ವರ್ಷದ ಅಪರಿಚಿತ ಮಹಿಳೆ ಮೃತಳಾಗಿ ಬಿದ್ದುಕೊಂಡಿದ್ದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ.

ಅಪರೂಪದ ಬಂಗಾರದ ಮೂರ್ತಿ ದರ್ಶನಕ್ಕೆ ಭಕ್ತರ ಕಾತರ: ಹೇಗಿದೆ ನೋಡಿ ಬಾಂಗ್ರಾ ಮಹಮಾಯಾ ಉತ್ಸವ:ಅಲ್ಲಿ ನಡೆದಿತ್ತು ಮಹಾ ಪವಾಡ

ಮೃತಳ ಎರಡು ಕಾಲಿನ ಪಾದಗಳಿಗೆ ಗಂಭೀರವಾಗಿ ಗಾಯಗಳಾಗಿದೆ.ಈಕೆ ಕೆಲವು ದಿನಗಳಿಂದ ಹರಿದ ಬಟ್ಟೆಗಳನ್ನು ಧರಿಸಿಕೊಂಡು ಕೈಯಲ್ಲಿ ಒಂದು ಕೈ ಚೀಲ ಹಿಡಿದಿಕೊಂಡು ಬೈಲೂರು ಕ್ರಾಸ್,‌ಸಣ್ಣಬಲಸೆ  ಕ್ರಾಸ್ ಹೆದ್ದಾರಿ ಬದಿಯಲ್ಲಿ ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ಥಳ ರೀತಿಯಲ್ಲಿ ತಿರುಗಾಡುತ್ತಿದ್ದಳು.

ಆದರೆ ಅಪರಿಚಿತ ವಾಹನ ಚಾಲಕ ತನ್ನ ವಾಹನವನ್ನು ಭಿಕ್ಷುಕಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅತಿ ವೇಗ ಹಾಗು ಅಜಾಗರುಕತೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ. ಈ ಅಪಘಾತದಲ್ಲಿ ಅಪರಿಚಿತ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ .ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button