ಕಾರವಾರ: ಹೆದ್ದಾರಿಯಲ್ಲಿ ಲಾರಿಯೊಂದರ ಚಾಲಕನೊಂದಿಗೆ ಮಾತನಾಡುತ್ತಿದ್ದ ಇಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ತಾಲೂಕಿನ ಮಾಜಾಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾರವಾರ ತಾಲೂಕಿನ ಕೊಂಕಣವಾಡದ ಸೂರಜ ರಾಣೆ ಎನ್ನುವವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಸ್ನೇಹಿತನೊಂದಿಗೆ ಚಾಲಕನ ಜೊತೆ ಸೂರಜ್ ರಾಣೆ ಲಾರಿಯೊಂದರ ಹೆದ್ದಾರಿಯ ಬದಿಯಲ್ಲಿ ನಿಂತು ಮಾತನಾಡುತ್ತಿದ್ದರು. ವೇಳೆ ಗೋವಾ ಕಡೆಯಿಂದ ಕಾರವಾರದತ್ತ ಅತಿವೇಗ ಹಾಗೂ ನಿಶ್ಕಾಳಜಿಯಿಂದ ಕಾರು ಚಲಾಯಿಸಿಕೊಂಡು ಬಂದ ಚಾಲಕ ಸೂರಜ್ ರಾಣೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಸೂರಜ ರಾಣೆ ಮೃತಪಟ್ಟಿದ್ದಾನೆ.
ಅಪಘಾತಕ್ಕೆ ಸಿಎಂ ಝಿರೋ ಟ್ರಾಫಿಕ್ ಕಾರಣ?
ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿಗಳು ಪರಾರಿಯಾಗಿದ್ದಾರೆ. ತಪ್ಪಿತಸ್ಥರನ್ನು ಬಂಧಿಸುವoತೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಮೃತನ ಸಂಬoಧಿ, ಸ್ನೇಹಿತರು ಜಮಾಯಿಸಿ ಕ್ರಮಕ್ಕೆ ಆಗ್ರಹಿಸಿದ ಘಟನೆ ನಡೆದಿದೆ. ಇದೇ ವೇಳೆ ಗೋವಾ ಸಿಎಂಗೆ ಝೀರೋ ಟ್ರಾಫಿಕ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ವಿಐಪಿಗಳಿಗಾಗಿ ಹೆದ್ದಾರಿಯಲ್ಲಿ ಝೀರೋ ಟ್ರಾಫಿಕ್ ಮಾಡಿ ಕತ್ತಲಲ್ಲಿ ಏಕಾಏಕಿ ಒನ್ ವೇಯಲ್ಲಿ ಎದುರು ಬದುರು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದಲೇ ಈ ಅಫಘಾತ ಜರುಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ