ಅಂಕೋಲಾ: ತಾಲೂಕಿನ ಎರಡು ಕಡೆ ಸಂಭವಿಸಿರುವ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿದ್ದು ತಾಲೂಕಾ ಆಸ್ಪತ್ರೆ ಎದುರು , ಮೃತ ಯುವಕರ ಕುಟುಂಬದವರು , ಹಿತೈಷಿಗಳು ಮತ್ತು ಊರವರರು ನೂರಾರು ಸಂಖ್ಯೆಯಲ್ಲಿ ಸೇರಿದ್ದು ಶೋಕದ ವಾತಾವರಣ ಕಂಡು ಬರುತ್ತಿದೆ.
ಅಘನಾಶಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ತಾಲೂಕಿನ ಕೃಷ್ಣಾಪುರ ಬಳಿ ಹಳ್ಳದ ನೀರಿನಲ್ಲಿ ಈಜಾಡಲು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತ ಪಟ್ಟ ಧಾರುಣ ಘಟನೆ ಸಂಭವಿಸಿದೆ.
ಬೆಳಂಬಾರದ ತಾಳೆಬೈಲ್ ನಿವಾಸಿ ರಾಹುಲ್ ಗಿರಿಧರ ಗೌಡ (23) ಮೃತ ವ್ಯಕ್ತಿಯಾಗಿದ್ದು ಇಂಜಿನಿಯರಿಂಗ್ ಮುಗಿಸಿದ್ದ ಈತ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಇತ್ತೀಚೆಗೆ ಊರಿಗೆ ಬಂದವ ರವಿವಾರ ಮದ್ಯಾಹ್ನ ತನ್ನ ಕುಟುಂಬ ಸಂಬಂಧಿ ಓರ್ವನ ಜೊತೆ ಕೃಷ್ಣಾಪುರದ ಐ.ಆರ್ .ಬಿ ಪ್ಲಾಂಟ್ ಹಿಂದುಗಡೆ ಇರುವ ಹಳ್ಳದ ನೀರಿನಲ್ಲಿ ಈಜಾಡಲು ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.
ಸುದ್ದಿ ತಿಳಿದ ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರು , ಮತ್ತು ಬೆಳಂಬಾರದ ನಾಗರಿಕರ ಸಹಕಾರ ಪಡೆದು, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ ಐಗಳ್ ಮತ್ತು ವಿಶಾಖ ಐಗಳ್ ಅವರು ಶೃದ್ಧಾಂಜಲಿ ವಾಹನದಲ್ಲಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ನೀರಿನಲ್ಲಿ ಮುಳುಗಿದರು ಮೃತ ಪಟ್ಟಿದ್ದಾರೆ ಎ೦ದು ಹೇಳದೆ ಅವರನ್ನು ಬದುಕಿಸಲು ಬೇರೆ ರೀತಿಯ ಪ್ರಯತ್ನ ಮುಂದುವರೆಸ ಬಹುದೇ ಎಂದು ಕುಟುಂಬಸ್ಥರು ಆಶಾ ಮನೋಭಾವನೆಯಿಂದ ಯೋಚಿಸಿದ್ದರಾದರೂ , ಅಸ್ಪತ್ರೆಗೆ ಬರುವಷ್ಟರಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದನ್ನು ಖಚಿತ ಪಡಿಸಿದರು.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಾವು
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ
ಬೈಕ್ ಸವಾರನೋರ್ವ ನಿಯಂತ್ರಣ ತಪ್ಪಿ ರಸ್ತೆಯಂಚಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟ ಘಟನೆ ತಾಲೂಕಿನ ಬೆಲೇಕೇರಿ (ಹಟ್ಟಿಕೇರಿ ಕ್ರಾಸ್ ಬಳಿಯ ) ರಸ್ತೆಯಲ್ಲಿ ರವಿವಾರ ಸಂಜೆ ಸಂಭವಿಸಿದೆ.
ಬೆಲೇಕೇರಿ ನಿವಾಸಿ ಸಾಹಿಲ್ ನಾಗೇಶ ನಾಯ್ಕ(22)ಮೃತ ದುರ್ದೈವಿ ಯುವಕನಾಗಿದ್ದು ಡಿಪ್ಲೊಮಾ ಪದವೀಧರನಾದ ಈತ ಗೋವಾದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು ರಜೆಯ ಮೇಲೆ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಈತ ಬೆಲೇಕೇರಿಯ ತನ್ನ ಮನೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ತಲೆ (ಹಣೆ ) ಮತ್ತಿತರ ಭಾಗಗಳಿಗೆ ಗಂಭೀರವಾಗಿ ಗಾಯಗೊಂಡು ಮೃತ ಪಟ್ಟಿರುವುದಾಗಿ ಹೇಳಲಾಗಿದೆ. ಸಾರಿಗೆ ಸಂಸ್ಥೆ ಸಿಬ್ಬಂದಿ ಆಗಿರುವ ನಾಗೇಶ ನಾಯ್ಕ ತನ್ನ ಮಗನ ಸಾವಿನ ಸುದ್ದಿ ಕೇಳಿ ರೋದಿಸುತ್ತಿದ್ದು, ಕುಟುಂಬಸ್ಥರು ಮತ್ತು ಊರ ನಾಗರಿಕರಲ್ಲಿ ಶೋಕದ ವಾತಾವರಣ ಕಂಡು ಬಂತು.
ಬೇರೆ ಬೇರೆ ಕಡೆ ನಡೆದ ಈ ಎರಡು ಘಟನೆಗಳಲ್ಲಿ ಇಂಜಿನಿಯರಿಂಗ್ ಮುಗಿಸಿದ ಇಬ್ಬರು ಯುವಕರು ಜೀವ ಕಳೆದು ಕೊಂಡಿದ್ದು,
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ