Focus NewsImportant
Trending

ಮೊಬೈಲ್‌ನಲ್ಲೇ ಪ್ರೇಮಾಂಕುರ: ಉತ್ತರಪ್ರದೇಶದಿಂದ ಬಂದು ರಸ್ತೆಯಲ್ಲಿ ಅಲೆದಾಡಿದ ಯುವಕರು: ಅನುಮಾನಾಸ್ಪದವಾಗಿ ವರ್ತಿಸಿದ ಯುವಕರಿಗೆ ಸಾರ್ವಜನಿಕರು ಮಾಡಿದ್ದೇನು?

ಕುಮಟಾ: ಮೊಬೈಲ್ ಮೂಲಕ ತಮ್ಮ ಸಂಪರ್ಕಕ್ಕೆ ಬಂದಿದ್ದ ಯುವತಿಯರನ್ನು ಭೇಟಿಯಾಗಲು ಉತ್ತರ ಪ್ರದೇಶದ ಯುವಕರು , ಅಲ್ಲಿಂದ ಕುಮಟಾಕ್ಕೆ ರೈಲಿನ ಮೂಲಕ ಆಗಮಿಸಿದ್ದರು. ಈ ವೇಳೆ ಇಲ್ಲಿ ಬಗ್ಗೋಣ ರಸೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವಾಗ ಕೆಲ ಯುವಕರು ವಿಚಾರಿಸಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಹಿಂಬಾಲಿಸಿದ ಸ್ಥಳೀಯರು ಹಿಡಿದು ಇಬ್ಬರು ಯುವಕರಿಗೆ ಬುದ್ಧಿಕಲಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಹಲವು ಇಂಟರೆಸ್ಟಿoಗ್ ಮಾಹಿತಿಗಳು ಹೊರಬಿದ್ದಿವೆ..

ಪೊಲೀಸರು ವಶಕ್ಕೆ ಪಡೆದು, ಅವರ ಬಳಿಯಿದ್ದ ಮೊಬೈಲ್‌ನ್ನು ಪರಿಶೀಲಿಸಿದಾಗ, ಇಲ್ಲಿನ ಯುವತಿಯರೊಡನೆ ಈ ಯುವಕರಿಗೆ ಪ್ರೇಮಾಂಕುರವಾಗಿರುವುದು ಗೊತ್ತಾಗಿದೆ. ಅಲ್ಲದೆ, ಇಲ್ಲಿನ ಯುವತಿಯರ ಜೊತೆಗಿರುವ ಪೋಟೊ ಕೂಡ ಅವರ ಮೊಬೈಲ್‌ನಲ್ಲಿದೆ. ಈ ಯುವತಿಯರೇ ಆ ಯುವಕರನ್ನು ಇಲ್ಲಿಗೆ ಕರೆಯಿಸಿದ್ದರು ಎಂದು ಪೊಲೀಸರಿಗೆ ಯುವಕರು ತಿಳಿಸಿದ್ದಾರೆ. ಉತ್ತರಪ್ರದೇಶದ ಮೂಲದ ಯುವಕರಾದ ಶಮೀಮ ಸಾಬ ಹಾಗೂ ಝಿಯಾ -ಉರ್‌ರೆ ಹಮಾನ ಎಂಬುವವರು ಮೊಬೈಲ್ ನಲ್ಲೇ ಬಣ್ಣದ ಮಾತುಗಳಿಂದ ಕುಮಟಾದ ಯುವತಿಯರನ್ನು ಮರುಳು ಮಾಡಿ ಭೇಟಿಯಾಗಲು ಬಂದಿದ್ದರು.

ಈ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ, ಸ್ಥಳೀಯರು ವಿಚಾರಿಸಿದಾಗ ಯುವಕರು ಉದ್ಧಟತನದಿಂದ ವರ್ತಿಸಿದರು ಎನ್ನಲಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ಸರಿಯಾಗಿ ಬುದ್ಧಿಕಲಿಸಿದ್ದಾರೆ. ಆದರೆ, ಇವರ ಬಳಿ ಯುವತಿಯರ ಜೊತೆ ಇರುವ ಫೋಟೋ ಇದ್ದು, ಯುವತಿಯರ ಪೋಷಕರನ್ನು ಕರೆದು ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button