ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ: ಆರೋಪಿಗಳ ಬಂಧನ

ಹೊನ್ನಾವರ: ವಿಭಾಗ ಭಟ್ಕಳ ಉಪವಿಭಾಗ ಮಂಕಿ ವಲಯ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹಡಿಕಲ್ ಅರಣ್ಯ ಸರ್ವೆ ನಂ. 19 ರಲ್ಲಿನ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾ ಸಾಗಿಸುತ್ತಿದ್ದ ಆರೋಪಿತಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ನಾಗರಾಜ ಈಶ್ವರ ನಾಯ್ಕ ಹಡಿಕಲ್, ಸಂದೀಪ ಕೇಶವ ನಾಯ್ಕ ಚಿತ್ತಾರ, ಗಂಗಾಧರ ತಿಮ್ಮಪ್ಪ ಆಚಾರಿ ಕೆಳಗಿನ ಇಡಗುಂಜಿ, ಸಂದೀಪ ರಮೇಶ ನಾಯ್ಕ ನೇಸಿನೀರ, ಗೌರೀಶ ಮಂಜುನಾಥ ನಾಯ್ಕ ನೇಸಿನೀರ, ಪ್ರವೀಣ ವಾಮನ ನಾಯ್ಕ ನೇಸಿನೀರ ಮತ್ತು ಪ್ರಕಾಶ ರಾಮ ಗೌಡ ಅಡಿಕೆಕುಳಿ ಇವರನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ.

ಪ್ರಸಿದ್ಧ ನಾಗಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯದಲ್ಲಿ ನವೆಂಬರ್ 29 ರಂದು ಚಂಪಾಷಷ್ಠಿ

ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ. ಟಿ. ಬೋರಯ್ಯ, ಆರ್‌ಎಫ್‌ಓ ಸವಿತಾ ಆರ್. ದೇವಾಡಿಗ, ಡಿಆರ್‌ಎಫ್‌ಓ ಶಿವಾನಂದ ಇಂಚಲ, ಯೋಗೇಶ ಮೊಗೇರ, ಮಹಾದೇವ ಮಡ್ಡಿ, ಸಂದೀಪ ಎಸ್. ಅರ್ಕಸಾಲಿ, ಮಂಜುನಾಥ ನಾಯ್ಕ, ಜಿ. ಸಂತೋಷ. ಷಣ್ಮುಖ, ಹವಳ ಹವಳಗಿ, ಲೋಹಿತ್ ನಾಯ್ಕ , ರೇಷ್ಮಾ ಜಿ. ನಾಯ್ಕ, ಅರಣ್ಯ ರಕ್ಷಕರಾದ ಮಹಾಬಲ ಗೌಡ, ಶಿವಾನಂದ ಪೂಜಾರಿ, ಸುರೇಂದ್ರನಾಥ ನಾಯ್ಕ ದೇವೇಂದ್ರ ಗೊಂಡ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ, ರಾಮ ನಾಯ್ಕ, ವಿನಾಯಕ ನಾಯ್ಕ ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version