Focus NewsImportant
Trending

ರಸ್ತೆ ದಾಟುವಾಗ ಬಾಲಕಿಗೆ ಡಿಕ್ಕಿಹೊಡೆದ ಕಾರು: ಲಾರಿ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸಾವು

ಭಟ್ಕಳ: ರಸ್ತೆ ದಾಟುತ್ತಿರುವಾಗ ಕಾರು ಡಿಕ್ಕಿಯಾಗಿ ಯುವತಿಯ ಮೇಲೆ ಲಾರಿ ಹರಿದು ತೀವ್ರ ಗಾಯಗೊಂಡಿದ್ದ ಯುವತಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟ ಘಟನೆ ಭಟ್ಕಳದಲ್ಲಿ ನಡೆದಿದೆ. ಬಾಲಕಿ ಮನೆಯವರೊಂದಿಗೆ ಅಮ್ಯೂಸ್‌ಮೆಂಟ್ ಪಾರ್ಕಿಗೆ ಹೋಗುವುದಕ್ಕೆ ರಸ್ತೆ ದಾಟುತ್ತಿರುವ ವೇಳೆ ಕಾರೊಂದು ಡಿಕ್ಕಿಹೊಡೆದಿತ್ತಯ. ಇದೇ ವೇಳೆ ವೇಗವಾಗಿ ಬಂದ ಲಾರಿಯು ಬಾಲಕಿಯ ಕಾಲು ಮತ್ತು ಕೈ ಹರಿದುಹೋಗಿತ್ತು. ಪರಿಣಾಮವಾಗಿ ಬಾಲಕಿ ತೀವ್ರ ಗಾಯಗೊಂಡಿದ್ದಳು. ಮೃತ ಬಾಲಕಿಯನ್ನು ಆಯಿಶಾ (15) ಎಂದು ಗುರುತಿಸಲಾಗಿದೆ.

Recruitment 2022: SSLC ಪಾಸಾದವರಿಗೆ ಉದ್ಯೋಗಾವಕಾಶ: 21 ರಿಂದ 69 ಸಾವಿರ ಆರಂಭಿಕ ವೇತನ

ಕೂಡಲೇ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಬಾಲಕಿ ಮೃತ ಪಟ್ಟಳೆನ್ನಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಕಾರು ಮತ್ತು ಲಾರಿ ಸ್ಥಳದಿಂದ ಪರಾರಿಯಾಗಿತ್ತು, ಈ ವೇಳೆ ಸ್ಥಳೀಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕಾರು ಮತ್ತು ಲಾರಿ ಬೆನ್ನಟ್ಟಿ ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button