ಸ್ತ್ರೀರತ್ನಮಾಲಾ ಸಂಸ್ಕೃತಪುಸ್ತಕ ಬಿಡುಗಡೆ

ಇತ್ತೀಚೆಗೆ ಹರಿಯಾಣಾ ರಾಜ್ಯದ ಸಮಾಲಖಾ ನಗರದಲ್ಲಿ ನಡೆದ ಅಖಿಲ ಭಾರತೀಯ ಸಂಸ್ಕೃತ ಮಹಿಳಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಶ್ರೀ ಮಹಾಬಲ ಭಟ್ಟ ಅವರ ’ಸ್ತ್ರೀರತ್ನಮಾಲಾ’ ಎಂಬ ಸಂಸ್ಕೃತಪುಸ್ತಕದ ಬಿಡುಗಡೆ ನಡೆಯಿತು. ಕೇಂದ್ರ ಸರಕಾರದ ಶಿಕ್ಷಣ ಖಾತೆಯ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಅವರು ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಸಚಿವೆ ’ಪ್ರಾಚೀನಭಾರತದ ನಾರಿಯರು ಅಬಲೆಯರಾಗಿರಲಿಲ್ಲ. ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಿದ್ದರು. ಅಂತಹ ನಾರಿಯರ ಕುರಿತು ಸಂಸ್ಕೃತ ಭಾರತಿಯು ಪುಸ್ತಕವನ್ನು ಹೊರತರುತ್ತಿರುವುದು ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟರು.

Recruitment 2022: SSLC ಪಾಸಾದವರಿಗೆ ಉದ್ಯೋಗಾವಕಾಶ: 21 ರಿಂದ 69 ಸಾವಿರ ಆರಂಭಿಕ ವೇತನ

ಸಂಸ್ಕೃತಭಾರತಿಯ ಅಖಿಲಭಾರತೀಯ ಅಧ್ಯಕ್ಷ ಗೋಪಬಂಧು ಮಿಶ್ರಾ ಅವರು ಪುಸ್ತಕ ಪರಿಚಯವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಹರಿಯಾಣಾ ರಾಜ್ಯದ ಸಾರಿಗೆ ಸಚಿವ ಮೂಲಚಂದ ಶರ್ಮಾ, ಸಂಸ್ಕೃತಭಾರತಿಯ ಪ್ರಧಾನ ಕಾರ್ಯದರ್ಶಿ ಶ್ರೀಶ ದೇವಪೂಜಾರಿ, ಸಂಘಟನಮಂತ್ರಿ ಶ್ರೀ ದಿನೇಶ ಕಾಮತ, ಕೊಂಕಣ ಪ್ರಾಂತ ಸಹಮಂತ್ರಿ ಶ್ಯಾಮಲಾ ಭಟ್ ಹಾಗೂ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಜರಿದ್ದರು.

ಲೇಖಕರು ಪ್ರಸ್ತುತ ಗೋವಾರಾಜ್ಯದ ಸೇಂಟ್ ಝೆವಿಯರ್ ಉಚ್ಚಮಾಧ್ಯಮಿಕ ಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದಾರೆ. ಅವರ ಚೊಚ್ಚಲ ಕೃತಿ ಇದಾಗಿದೆ. ಪುಸ್ತಕ ಬೇಕಾದವರು ಸಂಸ್ಕೃತಭಾರತಿಯನ್ನು ದೂರವಾಣಿ ಸಂಖ್ಯೆ 9860060373 ಸಂಪರ್ಕಿಸಲು ಕೋರಲಾಗಿದೆ.

Exit mobile version