Important
Trending

ಆಫೀಸ್ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಹೋದ ಯುವಕ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡಿ

ಅಂಕೋಲಾ: ಕಂಪನಿಯ ಆಫೀಸ್ ಕೆಲಸಕ್ಕೆ ಹೋಗಿ ಬರುವುದಾಗಿ ತಾನು ವಾಸಿಸುತ್ತಿದ್ದ ಸೋದರ ಮಾವನ ಮನೆಯಿಂದ ಹೊರಗೆ ಹೋಗಿದ್ದ ಯುವಕ ಮರಳಿ ಬರದೇ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಹಾಸನ ಜಿಲ್ಲೆಯ ಬೇಲೂರು ನಿವಾಸಿ ಹಾಲಿ ಅಂಕೋಲಾ ಪಟ್ಟಣದ ಕಾಕರಮಠದಲ್ಲಿ ವಾಸವಾಗಿದ್ದ ಪುನೀತ್ ವಿಷ್ಣು ಭಟ್ಟ (30) ಕಾಣೆಯಾದ ಯುವಕನಾಗಿದ್ದಾನೆ.

ಅನ್ನ-ಆಹಾರವಿಲ್ಲದೆ ನರಳಾಡುತ್ತಿದ್ದ ವೃದ್ಧೆಯ ನೆರವಿಗೆ ನಿಂತ ನ್ಯಾಯಾಧೀಶೆ: ರಾತ್ರೋರಾತ್ರಿ ಸ್ಥಳಕ್ಕೆ ತೆರಳಿ ರಕ್ಷಣೆ

ಈತ ನವಂಬರ್ 12ರಂದು ಬೆಳಿಗ್ಗೆ ತಾನು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಂಪನಿಯ ಆಫೀಸ್ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಅಂಕೋಲಾದ ಮಾವನ ಮನೆಯಿಂದ ಹೋದವನು ಇದುವರೆಗೆ ಸಂಪರ್ಕಕ್ಕೆ ಸಿಗದೇ ಕಾಣೆಯಾಗಿರುವುದಾಗಿ ಯುವಕನ ಸೋದರ ಮಾವ ಕಾಕರಮಠ ವಿಠ್ಠಲ ಸದಾಶಿವ ದೇವಸ್ಥಾನದ ಅರ್ಚಕ ಸುರೇಶ್ಚಂದ್ರ ಪಾಂಡುರಂಗ ಬಾಟೆ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಕಾಣೆಯಾದ ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಅಥವಾ ಆತನ ಬಗ್ಗೆ ಇತರೆ ಏನಾದರೂ ಮಾಹಿತಿಗಳಿದ್ದಲ್ಲಿ ಸಾರ್ವಜನಿಕರು ಅಂಕೋಲಾ ಪೋಲೀಸ್ ಠಾಣೆ ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಇಲಾಖೆ ವತಿಯಿಂದ ಕೋರಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button