Focus News
Trending

ಸಮಾಜವನ್ನು ಸುಸ್ಥಿರವಾಗಿ ಮುನ್ನಡೆಸಲು ಎಲ್ಲ ಸಮಾಜಗಳು ಒಟ್ಟಾಗಿ ಸಾಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಸಮಾಜವನ್ನು ಸುಸ್ಥಿರವಾಗಿ ಮುನ್ನಡೆಸಲು ಎಲ್ಲ ಸಮಾಜಗಳು ಒಟ್ಟಾಗಿ ಸಾಗಬೇಕು. ಆದರೆ ಸ್ವಾತಂತ್ರ‍್ಯಾ ನಂತರ ಭಾರತದಲ್ಲಿ ನಾವೆಲ್ಲ ಒಂದು, ದೇಶ ಮೊದಲು, ಜವಾಬ್ದಾರಿಯುತ ಪ್ರಜೆ ಎಂಬುದನ್ನು ಎಲ್ಲರೂ ಮರೆತಿದ್ದೇವೆ. ಸಮಾಜವಿಘಟಿಸುವ ಕೃತ್ಯಗಳು ನಿರಂತರವಾಗಿ ಆಗುತ್ತಿವೆ. ಇದು ದೂರಾಗಬೇಕು. ನಾವೆಲ್ಲರೂ ಮನುಷ್ಯರು, ದೇಶ ಮೊದಲೆಂಬ ಭಾವನೆ ಜಾಗ್ರತವಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ ಅಂಗವಾಗಿ ದುರ್ಬಲ ವರ್ಗಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಮಟ್ಟದ INICET ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್: ಸಾಧಕ ವಿದ್ಯಾರ್ಥಿನಿಯನ್ನು ಅಭಿನಂದಿಸಿ

ರಾಷ್ಟ್ರೀಯ ಮನೋಭಾವನೆಯಿಂದ ದೂರವಾಗುತ್ತ ಜಾತಿ, ಉಪಜಾತಿಗೆ ಸೀಮಿತವಾಗಿ ಸರ್ಕಾರಿ ಸೌಲಭ್ಯಕ್ಕಾಗಿ ಕಾಯುವುದು ಇಂದಿನ ಸಮಾಜದ ದೌರ್ಬಲ್ಯವಾಗಿದೆ ಎಂದರು. ಸರ್ಕಾರ ದೀನದಲಿತರಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅದನ್ನು ಪಡೆಯುವ ಸಮೂಹ ಸಮಾಜದ ಪ್ರಮುಖ ಪಥಕ್ಕೆ ಬರುತ್ತಿದೆ. ಸರ್ಕಾರ ನೀಡುವ ಸೌಲಭ್ಯ ಅಭಿವೃದ್ಧಿಗೆ ಬಳಕೆಯಾಗಬೇಕಿದೆ ಎಂದ ಅವರು, ಇಂದು ಪರಿಶಿಷ್ಟ ಜಾತಿ, ಪಂಗಡಗಳಲ್ಲಿಯೂ ಉಳ್ಳವರು ಸಾಕಷ್ಟಿದ್ದಾರೆ. ಅಂಥವರಿಗೇ ಸೌಲಭ್ಯ ನೀಡುವ ಬದಲು ಅದೇ ಸಮಾಜದ ಕಡುಬಡವರಿಗೆ ನೀಡುವ ಕಾರ್ಯ ಆಗಬೇಕಿದೆ. ಸರ್ಕಾರ ನೀಡುವ ಸೌಲಭ್ಯ ಸಮಾಜದ ನಿಜವಾದ ಫಲಾನುಭವಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಡಿಡಿ ಅಜ್ಜಪ್ಪ ಸೊಗಲದ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದ ಜನಾಂಗದ ಅಭಿವೃದ್ಧಿಗೆ ಜಾರಿಯಾಗಿರುವ ವಿವಿಧ ಯೋಜನೆಗಳ ಮಾಹಿತಿ ಮತ್ತು ಕಾಯ್ದೆಗಳ ಅರಿವು ಮೂಡಿಸುವ ಕಾರ್ಯ ಇಲಾಖೆಯಿಂದ ಆಗುತ್ತಿದೆ. ಸಮಾನ ಸಮಾಜ ನಿರ್ಮಾಣ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ವಿಸ್ಮಯ ನ್ಯೂಸ್, ಶಿರಸಿ

Back to top button