ಅಂಕೋಲಾ: ಪಾದಯಾತ್ರೆ ಸೈಕಲ್ ಸವಾರಿ,ಬೈಕ್ ರ್ಯಾಲಿ ಮತ್ತಿತರ ರೀತಿಯಲ್ಲಿ ಹಲವಾರು ಜನರು ನಾನಾ ರೀತಿಯ ಧ್ಯೇಯೋದ್ದೇಶಗಳೊಂದಿಗೆ ಬೇರೆ ಬೇರೆ ಕಡೆ ಪ್ರಯಾಣಿಸುವುದನ್ನು ನಾವೆಲ್ಲರೂ ಕಂಡಿರುತ್ತೇವೆ.ಅವೆಲ್ಲವುಗಳ ನಡುವೆಯೇ ಸುಧೀರ್ಘ 40,000 ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡು,ದೇಶ ವಿದೇಶ ಸುತ್ತುವ ಕನಸಿನೊಂದಿಗೆ ತನ್ನ ನಡಿಗೆ ಮುಂದುವರಿಸಿದ್ದಾನೆ. ಉತ್ತಮ ಸಮಾಜ ಮತ್ತು ಪರಿಸರ ನಿರ್ಮಾಣದ ಜನಜಾಗೃತಿ ಉದ್ದೇಶದಿಂದ ಪಾದಯಾತ್ರೆ ಹೊರಟಿರುವ ಗುಜರಾತಿನ ಯೋಗೇನ್ ಶಾ ಅವರಿಗೆ ಅಂಕೋಲಾದಲ್ಲಿ ತಾಲೂಕು ಆಡಳಿತದ ವತಿಯಿಂದ ತಹಶೀಲ್ಧಾರ ಉದಯ ಕುಂಬಾರ ಅವರು ಸ್ವಾಗತಿಸಿ ಶುಭ ಕೋರಿದರು.
ಗದ್ದೆಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು: ನೋವಲ್ಲೂ ಸಾರ್ಥಕತೆ ಮರೆದ ಕುಟುಂಬಸ್ಥರು
ಗುಜರಾತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾಗಿರುವ ಅವರು ಗುಜರಾತಿನ ಬರೋಡಾದಿಂದ ಪಾದಯಾತ್ರೆ ಆರಂಭಿಸಿದ್ದು ಉತ್ತರ ಭಾರತದ ಗುಜರಾತ್, ಹರ್ಯಾಣಾ, ಚಂದಿಗಡ, ಡೆಲ್ಲಿ ಮೊದಲಾದ ಸ್ಥಳಗಳಿಗೆ ತೆರಳಿ ಇದೀಗ ದಕ್ಷಿಣ ಭಾರತದ ಕಡೆ ಹೊರಟಿದ್ದು ಈಗಾಗಲೇ 14 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಕನ್ಯಾಕುಮಾರಿ ವರೆಗೆ ಕ್ರಮಿಸಿ ಭೂತಾನ್, ಶ್ರೀಲಂಕಾ ಮೊದಲಾದ ದೇಶಗಳಲ್ಲಿ ಸಹ ಜನ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.
ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಸಮಾಜದಲ್ಲಿ ಸಹನೆ ಕಡಿಮೆಯಾಗುತ್ತಿದೆ, ಜನರು ಒತ್ತಡದ ಪರಿಸ್ಥಿತಿಯಲ್ಲಿ ಬದುಕು ನಡೆಸಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಪ್ಲಾಸ್ಟಿಕ್ ಬಳಕೆ ಇನ್ನಿತರ ಕಾರಣಗಳಿಂದ ಪರಿಸರದ ಸಮತೋಲನ ತಪ್ಪುತ್ತಿದೆ ಸಮಾಜದಲ್ಲಿ ಪರಸ್ಪರ ಸಹಾಯ ಸಹಕಾರದ ಭಾವನೆ ಬೆಳಸಿಕೊಂಡು ಕ್ರಿಯಾಶೀಲರಾಗಿ ಬದುಕುವಂತೆ ಸಂದೇಶ ನೀಡುವ ಉದ್ದೇಶದಿಂದ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು. ತಮ್ಮ ಪಾದಯಾತ್ರೆಯಲ್ಲಿ ಸಹಕರಿಸುತ್ತಿರುವ ಸರ್ವರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು.
ಜನರು ಒತ್ತಡದ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಇಂದು ಸಮಾಜದಲ್ಲಿ ಸಹಾಯದ ಮನೋಭಾವ ಕಡಿಮೆಯಾಗಿದೆ ಮನುಷ್ಯರಲ್ಲಿ ಕಾಯಿಲೆಗಳು ಹೆಚ್ಚುತ್ತಿವೆ. ಯೋಗ ಮತ್ತು ಚಟುವಟಿಕೆಗಳು ಮನುಷ್ಯನ ಆರೋಗ್ಯ ವೃದ್ಧಿಗೆ ಕಾರಣವಾಗಿದ್ದು, ಈ ಹಿಂದೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಾನು ಗೂನು ಬೆನ್ನಿನ ವ್ಯಕ್ತಿಯಾಗಿಯೇ ಇರಬೇಕಿತ್ತು . ಆದರೆ ಇಂದು ಆರೋಗ್ಯವಂತನಾಗಿರುವದು ದಿನನಿತ್ಯದ ಯೋಗಾಭ್ಯಾಸ ಮತ್ತು ಚಟುವಟಿಕೆಯಿಂದ ಮಾತ್ರ ಸಾಧ್ಯವಾಗಿದೆ. – ಯೋಗೇನ ಶಾ ಜನ ಜಾಗೃತಿ ಯಾತ್ರಿಕ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ