Important
Trending

ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರುಷದ ಮಗುವಿಗೆ ಹಾವು ಕಚ್ಚಿ ಸಾವು

ಶಿರಸಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು ಕಚ್ಚಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬನವಾಸಿ ದಾಸನಕೊಪ್ಪದಲ್ಲಿ ನಡೆದಿದೆ. ಆಟವಾಡುತ್ತಿದ್ದ ವೇಳೆ ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದೆ. ಮೊದಲು ಯಾವುದೋ ಇರುವೆ ಕಚ್ಚಿರಬಹುದೆಂದು ಪಾಲಕರು ಸುಮ್ಮನಾಗಿದ್ದರು. ಆದ್ರೆ, ಕೆಲ ಹೊತ್ತಿನಲ್ಲೆ ಮಗುವಿನ ಬಾಯಿಯಲ್ಲಿ ನೊರೆ ಬರಲು ಪ್ರಾರಂಭವಾಗಿದ್ದನ್ನು ಕಂಡ ಮನೆಯವರು ಗಾಬರಿಯಾಗಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮಗು ಮೃತಪಟ್ಟಿತ್ತು.

ಊಟ ಮಾಡಿ ಮಲಗಿದ್ದವನು ನಾಪತ್ತೆ: ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿದ್ದೇನೆ ಎಂದು ಮಗನಿಗೆ ಕರೆ ಮಾಡಿದ ತಂದೆ  ಹೋದದ್ದೆಲ್ಲಿಗೆ ?

ಮೃತ ಮಗುವನ್ನು ತರಾನ್ ಮಹಮದ್ ಸಾಬ್ ಎಂದು ಗುರುತಿಸಲಾಗಿದೆ. ವೈದ್ಯರು ಪರೀಕ್ಷಿಸಿ ಮಗುವಿಗೆ ಹಾವು ಕಚ್ಚಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ಬನವಾಸಿ ಪೊಲೀಸರು ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button