Follow Us On

WhatsApp Group
Important
Trending

ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡದ ಬೈಕ್ ಸವಾರ: ಬಾಲಕಿ ಸಾವು

ಕುಮಟಾ: ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ಸಂತೇಗುಳಿ ಗ್ರಾ.ಪಂ ವ್ಯಾಪ್ತಿಯ ಬಾಸೋಳ್ಳಿ ಕ್ರಾಸ್ ಸಮೀಪ ನಡೆದಿದೆ. ತಾಲೂಕಿನ ಬಾಸೋಳ್ಳಿಯ ಸೋಡಿಗದ್ದೆಯ ನಿವಾಸಿ ಲಾವಣ್ಯ ಪರಮೇಶ್ವರ ನಾಯ್ಕ(13) ಮೃತ ಬಾಲಕಿ ಎಂದು ತಿಳಿದುಬಂದಿದೆ.

ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಯ್ಯಪ್ಪ ಮಾಲಾಧಾರಿ ಸಾವು

ಈಕೆಯು ಸಂಬoಧಿಕರಾದ ಚಂದ್ರಕಾoತ ನಾಯ್ಕ ಹಾಗೂ ನಾಗಶ್ರೀ ಜತೆ ರಸ್ತೆ ಪಕ್ಕದಲ್ಲಿ ನಡೆದುಕೊಡು ಹೋಗುತ್ತಿರುವಾಗ ವೇಗವಾಗಿ ಬಂದ ಬೈಕ್ ಡಿಕ್ಕಿಹೊಡೆದಿದೆ. ಬೈಕ್ ಸವಾರ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ, ನಡೆದುಕೊಂಡು ಹೋಗುತ್ತಿರುವ ಮೂವರಿಗೆ ಡಿಕ್ಕಿಹೊಡೆದಿದ್ದಾನೆ. ಘಟನೆಯಲ್ಲಿ ಚಂದ್ರಕಾoತ ನಾಯ್ಕ ಹಾಗೂ ನಾಗಶ್ರೀ ನಾಯ್ಕ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಲಾವಣ್ಯ ನಾಯ್ಕ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

ವಿಸ್ಮಯ ನ್ಯೂಸ್, ಕುಮಟಾ

Back to top button