Focus NewsImportant
Trending

ಅಡಿಕೆ ಕೊಯ್ಲು ಮಾಡುತ್ತಿರುವಾಗ ಮರದಿಂದ  ಬಿದ್ದು ಮೃತಪಟ್ಟ ರೈತ: ಶಾಸಕಿ ರೂಪಾಲಿ ನಾಯ್ಕರಿಂದ ಮಾನವೀಯ ನೆಲೆಯಲ್ಲಿ ತುರ್ತು ನೆರವು

ಅಂಕೋಲಾ: ರೈತನೋರ್ವ ಅಡಿಕೆ ಕೊಯ್ಲು ಮಾಡುತ್ತಿರುವಾಗ, ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕಲ್ಲೇಶ್ವರದಲ್ಲಿ ಸಂಭವಿಸಿದೆ.  ಮಂಜುನಾಥ  ಶಂಕರ ಸಿದ್ದಿ (38) ಮೃತ ದುರ್ದೈವಿಯಾಗಿದ್ದು, ಈತ ಶನಿವಾರ ತನ್ನ ಮನೆಯ ಅಡಿಕೆ ತೋಟದಲ್ಲಿ ಮರವನ್ನೇರಿ ಕೊಯ್ಲು ಮಾಡುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಮರದಿಂದ ಬಿದ್ದ ಮಗನನ್ನು ಕಂಡು ಆತನ ತಾಯಿ ಮಾದೇವಿ ಸಿದ್ಧಿ ಜೋರಾಗಿ ಚೀರಿಕೊಂಡಳು ಎನ್ನಲಾಗಿದೆ.

India Post Recruitment 2022: ಅಂಚೆ ಇಲಾಖೆಯಲ್ಲಿ ಹೊಸ ನೇಮಕಾತಿ: ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಮಂಜುನಾಥ ಸಿದ್ಧಿಯ ,ಕುಟುಂಬದ ಸಹೋದರ ಸುಬ್ರಾಯ ಗಣಪ ಸಿದ್ದಿ ಮತ್ತು, ಮೃತನ ಚಿಕ್ಕಪ್ಪ ಶಿವಪ್ಪ ಸಿದ್ಧಿಯವರು ಕೂಡಲೇ ಅಂಬುಲೆನ್ಸ್ ಗೆ ಕರೆ ಮಾಡಿ ಮಂಜುನಾಥ ಸಿದ್ಧಿಯನ್ನು ಅಂಕೋಲಾ, ತಾಲೂಕಾ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೂ ದುರದೃಷ್ಟ ವಶಾತ್ ಮಂಜುನಾಥ ಸಿದ್ಧಿ ಬದುಕುಳಿಯದೇ ಉಸಿರು ಕಳೆದು ಕೊಂಡ ಎನ್ನಲಾಗಿದೆ. ಕಳೆದ 1 – 2 ವರ್ಷಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡು ,ತನ್ನ ಕುಟುಂಬದ ಸಂಸಾರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಮಂಜುನಾಥನೂ ವಿದಿಯಾಟಕ್ಕೆ ಬಲಿಯಾಗಿ  ಶ್ರೀ ದೇವರ ಪಾದ ಸೇರುವಂತಾಗಿದೆ. ಮನೆಯ ಆಧಾರ ಸ್ಥಂಭ ಕಳೆದುಕೊಂಡ ದುಃಖದಲ್ಲಿ  ತಾಯಿ ಮಾದೇವಿ, ಪತ್ನಿ ಮಂಜುಳಾ ಮತ್ತು ಮಗಳು ಭವ್ಯ ರೋಧಿಸುವಂತಾಗಿದೆ.

ನಿಧನದ ವಾರ್ತೆ ಕೇಳಿದ ಶಾಸಕಿ ರೂಪಾಲಿ ನಾಯ್ಕ, ನೊಂದ ಬಡ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತನ  ಅಂತ್ಯ ಸಂಸ್ಕಾರಕ್ಕೆ ತುರ್ತು ಸಹಾಯಧನ ತಲುಪಿಸಿ, ಅಂತೆಯೇ ಮೃತ ದೇಹ ಸಾಗಿಸಲು ತಮ್ಮ ಕುಟುಂಬದ ನೀಲ ಪ್ರಭಾ ಟ್ರಸ್ಟ್  ವತಿಯಿಂದ ಕೊಡಮಾಡಿದ ಶೃದ್ಧಾಂಜಲಿ ವಾಹನದ ಮೂಲಕ,ತಾಲೂಕಾಸ್ಪತ್ರೆಯಿಂದ ಕಲ್ಲೇಶ್ವರಕ್ಕೆ ಮೃತ ದೇಹ ಸಾಗಿಸಲು ನೆರವು ಕಲ್ಪಿಸಿ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದಾರೆ.ಅಂತೆಯೇ ಮೃತ ದುರ್ದೈವಿ ರೈತನ ಬಡ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸುವ ಭರವಸೆ ನೀಡಿದ್ದು ,ಶಾಸಕರ ತುರ್ತು ನೆರವಿನ ಸ್ಬಂಧನೆಗೆ ಸ್ಥಳೀಯರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ,ಕಾನೂನು ಕ್ರಮ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Related Articles

Back to top button