Follow Us On

WhatsApp Group
Focus News
Trending

ದಿನವೊಂದರಲ್ಲೇ ಗರಿಷ್ಠ 14 ಕೇಸ್ ! ಅಂಕೋಲಾದಲ್ಲಿ ಒಟ್ಟೂ 86 ಪ್ರಕರಣ ದಾಖಲು

  • ಚೆಂಡಿಯಾ-ಹಟ್ಟಿಕೇರಿ ಸೋಂಕಿನ ಸಂಬಂಧಕ್ಕೆ ಸೇತುವೆಯೇನು?
  • ಹಟ್ಟಿಕೇರಿ 5, ಬೊಬ್ರುವಾಡ 3, ಮುಲ್ಲಾವಾಡ 1, ತೆಂಕಣಕೇರಿ 1, ಜಮಗೋಡ 1, ಹಾರವಾಡ 1, ಲಕ್ಷ್ಮೇಶ್ವರ 1, ಬೆಳಂಬರದಲ್ಲಿಯೂ 1 ಸೋಂಕು ಧೃಡ
[sliders_pack id=”1487″]

ಅಂಕೋಲಾ : ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರೆದಿದ್ದು, ಒಂದೇ ದಿನಕ್ಕೆ 162 ಪ್ರಕರಣಗಳು ಧೃಡಗೊಂಡಿದೆ. ಇದೆ ವೇಳೆ ತಾಲೂಕಿನಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಶನಿವಾರ ಒಂದೇ ದಿನಕ್ಕೆ 14 ಸೋಂಕಿನ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ (ಹೆಲ್ತ್ ಬುಲೆಟಿನ್ ಪ್ರಕಾರ 16). ಈ ಮೂಲಕ ಸೋಂಕಿತರ ಸಂಖ್ಯೆಯು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ದಿನವೊಂದರಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದಂತಾಗಿದೆ. ತಾಲೂಕಿನಲ್ಲಿ ಈವರೆಗೆ ಒಟ್ಟೂ ಸೋಂಕಿತರ ಸಂಖ್ಯೆ 86ಕ್ಕೆ ತಲುಪಿದೆ (ಹೆಲ್ತ್ ಬುಲೆಟಿನ್ ಪ್ರಕಾರ 87). ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲಿಯೂ ಸೋಂಕಿನ ನಂಜು ಹರಡುತ್ತಿದೆ.©Copyright reserved by Vismaya tv

ಚೆಂಡಿಯಾ-ಹಟ್ಟಿಕೇರಿ ಸೋಂಕಿನ ಸಂಬಂಧದ ಸೇತುವೆ : ಹಟ್ಟಿಕೇರಿಯ ಸೇತುವೆ ಹತ್ತಿರದ ಒಂದೇ ಕುಟುಂಬದ 5 ಸದಸ್ಯರಲ್ಲಿ ಸೋಂಕು ಧೃಡಪಟ್ಟಿದೆ. ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಮಹಿಳೆಯೋರ್ವಳಲ್ಲಿ ಈ ಹಿಂದೆ ಸೋಂಕು ಕಾಣಿಸಿಕೊಂಡ ತರುವಾಯ ಸೋಂಕಿತೆಯ ಮಗಳು ಹಟ್ಟಿಕೇರಿಯ ತನ್ನ ಅಜ್ಜಿಮನೆಯಲ್ಲಿ ಕೆಲದಿನ ಉಳಿದು ಹೋಗಿದ್ದಳು ಎನ್ನಲಾಗಿದ್ದು, ನಂತರ ಆ ಯುವತಿಯಲ್ಲಿಯೂ ಸೋಂಕು ಧೃಡಪಟ್ಟಿತ್ತು. ©Copyright reserved by Vismaya tvಅವಳ ಪ್ರಾಥಮಿಕ ಸಂಪರ್ಕದಿಂದಾಗಿಯೇ ಹಟ್ಟಿಕೇರಿಯ ಈ ಕುಟುಂಬದವರಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಂಕಿತ ಯುವತಿ ಗುಣಮುಖರಾಗಿ ಕಾರವಾರ ಕೋವಿಡ್ ವಾರ್ಡನಿಂದ ಇಂದು ಬಿಡುಗಡೆಗೊಂಡಿದ್ದರೆ, ಅವಳ ಅಜ್ಜಿಮನೆಯವರು ಸೋಂಕಿನ ಲಕ್ಷಣಗಳಿಂದ ಆಸ್ಪತ್ರೆ ಸೇರುವಂತಾಗಿರುವುದು ವಿಪರ್ಯಾಸವೇ ಸರಿ.
ಸೋಂಕಿತನ ಸಂಪರ್ಕದಿಂದ ಮುಂದುವರೆಯಿತೇ ನಂಜು? : ಬೊಬ್ರುವಾಡದ ಒಂದೇ ಕುಟುಂಬದ 3 ಸದಸ್ಯರಲ್ಲಿ ಸೋಂಕು ಧೃಡಪಟ್ಟಿದ್ದು, ಈ ಹಿಂದಿನ ಕುಂಬಾರಕೇರಿಯ ಸೋಂಕಿತರೋರ್ವರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ಸಂಪರ್ಕದ ನಂಟು ಮುಂದುವರೆದಿದ್ದು ಲಕ್ಷ್ಮೇಶ್ವರದ ಆಟೋರಿಕ್ಷಾ ಚಾಲಕನೋರ್ವನ ಪತ್ನಿಯಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ರಿಕ್ಷಾ ಚಾಲಕ ಸೋಂಕಿತ ವ್ಯಕ್ತಿಯೋರ್ವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದ್ದು ತದನಂತರ ಅವರ ಕುಟುಂಬದವರ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ಪರೀಕ್ಷಾ ವರದಿಯಲ್ಲಿ ರಿಕ್ಷಾ ಚಾಲಕನ ಹೆಂಡತಿಯ ವರದಿ ಪಾಸಿಟಿವ್ ಎಂದು ಧೃಡಪಟ್ಟಿದೆ.©Copyright reserved by Vismaya tv
ಹಾರವಾಡದ 29ರ ಮಹಿಳೆ, ಜಮಗೋಡಿನ 60 ಮಹಿಳೆ, ಮುಲ್ಲಾವಾಡದ 32ರ ಮಹಿಳೆಯಲ್ಲಿ ಸೋಂಕು ಧೃಡಪಟಿದ್ದು ಇವರೆಲ್ಲರೂ ಆಯಾ ವ್ಯಾಪ್ತಿಯ ಈ ಹಿಂದಿನ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನುಳಿದಂತೆ ಬೆಳಂಬರದ ಮೂಲೆಮನೆಯ 7ರ ಬಾಲಕ ಮತ್ತು ತೆಂಕಣಕೇರಿಯ 70ರ ವೃದ್ಧನಲ್ಲಿ ಸಾಮಾನ್ಯ ಜ್ವರಲಕ್ಷಣ (ಐ.ಎಲ್.ಐ) ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.


ದಿನಗಳೆದಂತೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರು ತಮಗೆ ಎಲ್ಲಿ ಈ ರೋಗ ಭಾದೆ ಅಂಟಿಕೊಳ್ಳುತ್ತದೆಯೇ ಎಂಬ ಭಯ ಮತ್ತು ಆತಂಕದ ನಡುವೆ ಕಾಲಕಳೆಯುವಂತಾಗಿದೆ. ಇನ್ನು ಕೆಲವರು ಇದೆಲ್ಲಾ ಇನ್ನು ಮುಂದೆ ಸಾಮಾನ್ಯ ಖಾಯಿಲೆ ಎಂಬಂತೆ ತಿಳಿದು ರೋಗಲಕ್ಷಣ ಮತ್ತು ಹರಡುವಿಕೆ ಬಗ್ಗೆ ಹೆಚ್ಚಿನ ತಲೆ ಕೆಡೆಸಿಕೊಂಡಿರುವಂತಿಲ್ಲ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button