ಜಿಲ್ಲೆಯಲ್ಲಿಯೂ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ

[sliders_pack id=”2570″]

ಕಾರವಾರ: ಜಿಲ್ಲಾಡಳಿತದ‌ ಎಲ್ಲಾ ಮುನ್ನೆಚ್ಚರಿಕಾ‌ ಕ್ರಮಗಳ‌ ನಡುವೆಯೂ ಜಿಲ್ಲೆಯಲ್ಲಿ ಕರೊನಾ ಸಂಖ್ಯೆ ಗಗನಮುಖಿಯಾಗಿದೆ. ಆದರೆ ಆಶಾದಾಯಕ ಬೆಳವಣಿಗೆ ಅಂದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡಾ‌ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಭಾನುವಾರ 85 ಮಂದಿಗೆ ಕರೊನಾ‌ ಕಾಣಿಸಿಕೊಂಡರೆ, 90 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮನೆಯಲ್ಲಿಯೇ‌ ಚಿಕಿತ್ಸೆ ಆರಂಭ:
ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕರೊನಾ ವಾರ್ಡಿನಲ್ಲಿ ಈವರೆಗೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ©Copyright reserved by Vismaya tv ಅವರವರ  ಆರೋಗ್ಯ ಸ್ಥಿತಿಯ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ದಾಖಲು ಮಾಡಲಾಗುತ್ತಿತ್ತು. ಆದರೆ, ಇದೀಗ ರೋಗ ಲಕ್ಷಣ ರಹಿತವಾಗಿರುವವರಿಗೆ ಹೋಮ್ ಐಸೋಲೇಶನ್(ಮನೆಯಲ್ಲಿಯೇ ಚಿಕಿತ್ಸೆ) ಪ್ರಾರಂಭಿಸಲಾಗಿದೆ.

ಹೇಗಿರಲಿದೆ ಹೋಮ್‌ ಐಸೋಲೇಷನ್:?
ನಿಗದಿತ ಸಮಯಕ್ಕೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪೊಲೀಸರು ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ತೆರಳುತ್ತಾರೆ.©Copyright reserved by Vismaya tv ಈಗ ಜಿಲ್ಲೆಯಲ್ಲಿ 85 ಮಂದಿ ಹೋಮ್ ಐಸೋಲೇಷನ್‍ಗೆ ಒಳಪಟ್ಟಿದ್ದು,‌ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

[sliders_pack id=”1487″]

ಇಂದು 85 ಕರೊನಾ ಪ್ರಕರಣ ದಾಖಲು:
ದಾಂಡೇಲಿ 23, ಕುಮಟಾ 13, ಕಾರವಾರ 13, ಅಂಕೋಲಾ 5, ಹೊನ್ನಾವರ 4, ಭಟ್ಕಳ 11, ಶಿರಸಿ 9, ಯಲ್ಲಾಪುರ 1, ಮುಂಡಗೋಡ 3, ಹಳಿಯಾಳದಲ್ಲಿ 3 ಕೇಸ್ ದೃಢಪಟ್ಟಿವೆ.

ಇಂದು 90 ಮಂದಿ ಆಸ್ಪತ್ರೆಯಿಂದ‌ ಬಿಡುಗಡೆ:
ಕುಮಟಾದಲ್ಲಿ 18, ಹೊನ್ನಾವರ 13 ಹಳಿಯಾಳದಲ್ಲಿ 44, , ಜೋಯ್ಡಾ 2 , ಸಿದ್ದಾಪುರ 4 , ಯಲ್ಲಾಪುರ 4, ಮುಂಡಗೋಡದಲ್ಲಿ‌ ಮೂವರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಹಳಿಯಾಳದಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version