- ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದ ವಿಜಯಕುಮಾರ ನಾಯ್ಕ
- ಅಧಿಕಾರಿಗಳ ಗಮನಸೆಳೆದಿತ್ತು ವಿಸ್ಮಯ ಟಿ.ವಿ
- ತಕ್ಷಣವೇ ಸ್ಪಂದಿಸಿದ ಕುಮಟಾ ಉಪವಿಭಾಗಾಧಿಕಾರಿಗಳು
- ತಹಶೀಲ್ದಾರ ಮತ್ತು ಪುರಸಭೆ ಮುಖ್ಯಾಧಿಕಾರಿಯಿಂದ ಗುತ್ತಿಗೆದಾರನಿಗೆ ಎಚ್ಚರಿಕೆ
ಅಂಕೋಲಾ: ಪಟ್ಟಣದ ಕೋಟೆವಾಡಾದಲ್ಲಿರುವ ಹಿಂದೂ ಸ್ಮಶಾನ ಭೂಮಿಗೆ ಹೊಸ ಕಳೆ ಬರುತ್ತಿದ್ದು, ಶೆಡ್ ನ ಮೇಲ್ಚಾವಣೆ ಶೀಟ್ ಹೊದಿಕೆ ಕಾರ್ಯ ಪ್ರಗತಿಯಲ್ಲಿದೆ. ಶೆಡ್‍ಗೆ ಸುಣ್ಣ ಬಣ್ಣ ಬಳಿಯಲಾಗಿದ್ದು ಆವರಣದ ಸ್ವಚ್ಛತೆಯೂ ಪುರಸಭೆ ಸಿಬ್ಬಂದಿಗಳು ಶ್ರಮ ವಹಿಸಿದ್ದಾರೆ.
ಕಿತ್ತು ಹೋದ ಶೆಡ್‍ನ ಮೇಲ್ಛಾವಣೆಯಿಂದ ಮಳೆಗಾಲದಲ್ಲಿ ಶವಸಂಸ್ಕಾರ ಆಗುವ ತೊಂದರೆ ಕುರಿತು ಕನಸಿಗದ್ದೆಯ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿ ಈ ಕುರಿತು ಸ್ಮಶಾನದ ಅಭಿವೃದ್ಧಿಗೆ ಗಮನ ಹರಿಸುವಂತೆ ಪುರಸಭೆಗೆ ಮನವಿ ನೀಡಿದ್ದೂ ಅಲ್ಲದೇ ಇಲ್ಲಿಯ ದೃಶ್ಯಾವಳಿ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸುದ್ದಿ ಮಾಧ್ಯಮಗಳಲ್ಲಿಯೂ ಪ್ರಕಟವಾಗಿದ್ದವು.©Copyright reserved by Vismaya tv
ವಿಸ್ಮಯ ಟಿವಿ ಸಹ ಸೋರುತ್ತಿರುವ ಶೆಡ್ ಕೆಳಗೆ ‘ಚಿತೆ’ ಉರಿಸಲಾಗದೇ ಚಿಂತೆ ಪಡುವ ನಾಗರಿಕರು ಎಂಬ ನಿಟ್ಟಿನಲ್ಲಿ ಸ್ಮಶಾನದ ಹಲವು ಅವ್ಯವಸ್ಥೆ ಸರಿಪಡಿಸುವ ಕುರಿತು ವಿಸ್ತøತ ವರದಿ ಬಿತ್ತರಗೊಳಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿತ್ತು. ತಕ್ಷಣವೇ ಸ್ಪಂದಿಸಿದ ಕುಮಟಾ ಉಪವಿಭಾಗಾಧಿಕಾರಿ ಮತ್ತು ಅಂಕೋಲಾ ಪುರಸಭೆಯ ಆಡಳಿತಾಧಿಕಾರಿ ಅಜೀತ ಎಮ್, ತಹಶೀಲ್ದಾರ ಕಾರ್ಯಾಲಯದಲ್ಲಿ ವಿಶೇಷ ಸಭೆ ಕರೆದು ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರನಿಗೆ ತುರ್ತಾಗಿ ಕಾಮಗಾರಿ ಮುಗಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದರು.
ಪುರಸಭೆ ಮುಖ್ಯಾಧಿಕಾರಿ ಇದೆ ವೇಳೆ ಕೊಂಚ ಗರಂ ಆಗಿ ಗುತ್ತಿಗೆದಾರನನ್ನುದ್ದೇಶಿಸಿ, ನಿನ್ನ ವಿಳಂಬ ನೀತಿಯಿಂದ ಸಾರ್ವಜನಿಕರು ಆಡಳಿತ ವ್ಯವಸ್ಥೆ ಮೇಲೆ ತಪ್ಪು ತಿಳಿಯುವಂತಾಗಿದ್ದು ಈಗಲಾದರೂ ಕಾಮಗಾರಿಯನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಯ್ಯ ಎಂದು ಕೊಂಚ ಬೇಸರದಿಂದಲೇ ನುಡಿದಿದ್ದರು ಮತ್ತು ಸ್ಮಶಾನದ ಆವರಣದ ವಿಶೇಷ ಸ್ವಚ್ಛತೆಗೆ ತಮ್ಮ ಪೌರ ಸಿಬ್ಬಂದಿಗಳನ್ನು ನೇಮಿಸಿ ಕರ್ತವ್ಯ ನಿಭಾಯಿಸಿದ್ದರು. ತಹಶೀಲ್ದಾರ ಉದಯಕುಂಬಾರ ಸಹ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರನಿಗೆ ಎಚ್ಚರಿಸಿದ್ದರು.
ಸ್ಥಳೀಯ ಗುತ್ತಿಗೆದಾರ ಅಂತೂ-ಇಂತೂ ಇಲಾಖೆಯ ಶರತ್ತು ಮತ್ತು ಸಾರ್ವಜನಿಕರ ಬೇಡಿಕೆಗನುಸಾರವಾಗಿ ಕೆಲಸ ಕಾರ್ಯ ಆರಂಭಿಸಿ ಅದು ಈಗ ಮುಕ್ತಾಯದ ಹಂತದಲ್ಲಿದೆ. ©Copyright reserved by Vismaya tv
ಮೇಲ್ನೋಟಕ್ಕೆ ಗುಣಮಟ್ಟದಲ್ಲಿಯೂ ಒಳ್ಳೆಯ ಕೆಲಸ ಮಾಡಿದಂತಿದ್ದು ಆ ಮೂಲಕ ಗುತ್ತಿಗೆದಾರ ಜನತೆಯ ಆಕ್ರೋಶ ತಣ್ಣಗಾಗಿಸಿದಂತಾಗಿದೆ. ಸಂಬಂಧಿಸಿದ ಪುರಸಭೆ ಇಷ್ಟಕ್ಕೆ ಸುಮ್ಮನಾಗದೇ ಸ್ಮಶಾನದ ಸಂಪೂರ್ಣ ಅಭಿವೃದ್ಧಿಗೆ ಮುಂದಾಗಬೇಕು ಮತ್ತು ಒರ್ವ ಕಾವಲುಗಾರನನ್ನು ನೇಮಿಸಿ ನಿರಂತರ ನಿರ್ವಹಣೆಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಆಶಯವಾಗಿದೆ. ಸಾರ್ವಜನಿಕರು ಸಹ ಅಂತ್ಯ ಸಂಸ್ಕಾರ ಕ್ರಿಯೆ ಪೂರ್ಣಗೊಳಿಸಿದ ನಂತರ ಸ್ವಚ್ಛತೆಗೆ ಆದ್ಯತೆ ನೀಡಿ ಆಡಳಿತ ವ್ಯವಸ್ಥೆ ಜೊತೆ ಸಹಕರಿಸಬೇಕಿದೆ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
[sliders_pack id=”1487″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)