ಅಂಕೋಲಾ: ಯಾವುದೇ ಪರವಾನಗಿ ಇಲ್ಲದೇ ವಾಹನವೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 6 ಎತ್ತುಗಳನ್ನುರಕ್ಷಿಸಿ ವಾಹನ ಸಮೇತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರೇಲ್ವೆ ನಿಲ್ದಾಣದ ಸಮೀಪ ಗಾಂಜಾ ಮಾರಾಟ: 4 ಕೆ.ಜಿಗೂ ಅಧಿಕ ಗಾಂಜಾ ವಶಕ್ಕೆ
ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ ಕಲ್ಲಪ್ಪ ಮಹಾದೇವಪ್ಪ ರಾಮನಕೊಪ್ಪ (32) ಜೊತೆ ಸ್ಥಳೀಯ ದೊಡ್ಡ ಅಲಗೇರಿ ಗ್ರಾಮದ ನಿವಾಸಿಗಳಾದ ಸುರೇಶ ಗಣು ನಾಯ್ಕ (55) ಸುಭಾಷ ನಾಗೇಶ ನಾಯ್ಕ (35) ಬಂಧಿತ ಆರೋಪಿಗಳಾಗಿದ್ದು ಇವರು ಸಂಬಂಧಿಸಿದ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮಹಿಂದ್ರ ಬೊಲೆರೋ ವಾಹನದಲ್ಲಿ ಸುಮಾರು 60 ಸಾವಿರ ರೂಪಾಯಿ ಮೌಲ್ಯದ 6 ಎತ್ತುಗಳನ್ನು ಯಾವುದೇ ಸುರಕ್ಷತೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ತುಂಬಿ, ಅವುಗಳಿಗೆ ನೀರು, ಹುಲ್ಲು ನೀಡದೇ, ತಲೆ ಮತ್ತಿತರ ಭಾಗಗಳನ್ನು ಹಗ್ಗದಿಂದ ಬಿಗಿದು ಗಟ್ಟಿಯಾಗಿ ಕಟ್ಟಿ ವಾಹನ ಪರವಾನಗಿಯನ್ನು ಉಲ್ಲಂಘಿಸಿ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಾಳೇಗುಳಿ ಅಲಗೇರಿ ಕ್ರಾಸ್ ಬಳಿ ಖಚಿತ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು ಎತ್ತುಗಳ ರಕ್ಷಣೆ ಮಾಡಿ 2 ಲಕ್ಷ ರೂಪಾಯಿ ಮೌಲ್ಯದ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಗೀತಾ ಶಿರ್ಶಿಕರ ಪ್ರಕರಣದಾಖಲಿಸಿದ್ದಾರೆ.ಆರೋಪಿತರನ್ನುನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಭಾವಿಕೇರಿ , ಅಲಗೇರಿ, ಬಡಗೇರಿ, ಗೌರಿಕೆರೆ ಮತ್ತಿತರ ಭಾಗಗಳಲ್ಲಿ ದಿನದಿಂದ ದಿನಕ್ಕೆ ಎಮ್ಮೆ, ಹಸು ಸೇರಿದಂತೆ ನೂರಾರು ಜಾನುವಾರುಗಳು ರಾತ್ರಿ ಬೆಳಗಾಗುವುದರೊಳಗೆ ನಾಪತ್ತೆಯಾಗುತ್ತಿದ್ದು,ಹಲವು ರೈತರು ಆತಂಕಗೊಳ್ಳುವಂತಾಗಿತ್ತು.ಇದೇ ವಾಹನವು ಆಗಾಗ ಈ ಭಾಗದಲ್ಲಿ ಓಡಾಡಿಕೊಂಡಿತ್ತು ಎನ್ನಲಾಗಿದೆ.
ಇವರು ಇಲ್ಲವೇ ಇಂಥಹ ದಂದೆಯಲ್ಲಿ ತೊಡಗಿದ ಇತರರು ಜಾನುವಾರುಗಳನ್ನು ಎಲ್ಲಿಂದ ಖರೀದಿಸಿ ಯಾವ ಕಡೆ ಸಾಗಿಸುತ್ತಿದ್ದರು ? ಇಲ್ಲವೇ ಕದ್ದು ಇವುಗಳನ್ನು ಸಾಗಿಸಲಾಗುತ್ತಿತ್ತೇ ? ಇವುಗಳನ್ನು ವಧಾಲಯಕ್ಕೆ ಸಾಗಿಸಿ ಮಾಂಸ ಮಾರಾಟ ದಂದೆ ನಡೆಸಲಾಗುತ್ತಿತ್ತೇ ಎಂಬಿತ್ಯಾದಿ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿವೆ.ಪೊಲೀಸರ ಚುರುಕಿನ ದಾಳಿಯಿಂದ ಅಕ್ರಮ ದಂಧೆ ಕೋರರು ಕಾನೂನಿನ ಮುಷ್ಟಿಯಲ್ಲಿ ಸಿಲುಕಿಕೊಳ್ಳುವಂತಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡು ಈ ಹಿಂದಿನ ಹಲವು ಪ್ರಕರಣಗಳಲ್ಲಿ ಶಾಮೀಲಾಗಿರಬಹುದಾದ ಅಕ್ರಮ ಜಾಲ ಬಯಲಿಗೆಳೆಯುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.ಈ ಹಿಂದೆಯೂ ತಾಲೂಕಿನ ಹಲವೆಡೆ ಅಕ್ರಮ ಗೋ ಸಾಗಾಟ ನಡೆಯುತ್ತಿರುವ ಕುರಿತು ವಿಸ್ಮಯ ವಾಹಿನಿಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ