Focus NewsImportant
Trending

ಹೊಡೆದಾಟಕ್ಕೆ ಸಾಕ್ಷಿಯಾದ ತಹಶೀಲ್ದಾರ್ ಕಾರ್ಯಾಲಯದ ಆವರಣ: ರಕ್ತ ಚೆಲ್ಲಿದರೂ ದಾಖಲಾಗದ ಪೊಲೀಸ್ ಪ್ರಕರಣ

ಅಂಕೋಲಾ: ತಹಶೀಲ್ಧಾರ ಕಾರ್ಯಾಲಯದ ಆವರಣದಲ್ಲೇ ಇಬ್ಬರು ವ್ಯಕ್ತಿಗಳ ನಡುವೆ ಮಾರಾಮಾರಿ ಸಂಭವಿಸಿ,ಗಾಯಾಳುಗಳಾದರೂ ಪೋಲೀಸ್ ದೂರು ನೀಡಲು ವಿಳಂಬವಾಗುತ್ತಿರುವುದು ಏಕೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ. ಹೊನ್ನಿಕೇರಿಯ ಓರ್ವ ಮತ್ತು ಕೇಣಿಯ ಇನ್ನೋರ್ವನ ನಡುವೆ ಸಾರ್ವಜನಿಕರೆದುರೇ ನಡೆದ ಈ ಜಗಳಾಟದ ಘಟನೆ, ಇಬ್ಬರ ನಡುವೆ  (ಈ ಹಿಂದಿನಿಂದಲೂ ) ಇರಬಹುದಾದ ಹಳೆಯ ವೈಷಮ್ಯದಿಂದಲೇ ನಡೆದಿರ ಬಹುದು ಎನ್ನಲಾಗಿದೆ.

ಕಾರು, ಬಸ್‌ ಹಾಗೂ ಬೈಕ್ ನಡುವೆ ಸರಣಿ ಅಪಘಾತ:  ಬಸ್ ಅಡಿ ಚಕ್ರಕ್ಕೆ ಸಿಲುಕಿ ಓರ್ವ ಸಾವು: ಇಬ್ಬರು ಮಕ್ಕಳಿಗೆ ಗಾಯ

ಕಳೆದ 2- 3 ವರ್ಷಗಳಿಂದೀಚೆಗೆ  ಹೊನ್ನಿಕೇರಿ ಯುವಕನ ಮನೆಯ ಗೇಟ್ ಕಳ್ಳತನ ಪ್ರಕರಣ  ನ್ಯಾಯಾಲಯದ ಮೆಟ್ಟಿಲೇರಿದ್ದು ಇದೇ ವಿಷಯಕ್ಕೆ ಸಂಬಂಧಿಸಿದಂತೆ  ಪರಸ್ಪರರ ನಡುವೆ  ಮಾತಿಗೆ ಮಾತು ಬೆಳೆದು ನಾ ಹೆಚ್ಚು, ನೀ ಹೆಚ್ಚು ಎಂಬಷ್ಟರ ಮಟ್ಟಿಗೆ  ಮುಂದುವರೆದು, ಸ್ಥಳದಲ್ಲೇ ಕೈಗೆ ಸಿಕ್ಕ ಸಿಮೆಂಟ್ ಇಂಟರ್ ಲಾಕ್ ತೆಗೆದುಕೊಂಡು ಹೊಡೆದಾಡಿರುವ  ಸಾಧ್ಯತೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು,ನೆಲಹಾಸು ಹಾಗೂ ಆವರಣದ ಅಲ್ಲಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ.ತಹಶೀಲ್ದಾರ್ ಕಾರ್ಯಲಯದ ಪಕ್ಕದಲ್ಲೇ ಪೊಲೀಸ್ ಠಾಣೆಯೂ ಇದ್ದು ,ಗೌಜು ಗದ್ದಲ,ಸಾರ್ವಜನಿಕ ಗುಂಪು ಸೇರುತ್ತಿರುವ  ಘಟನೆ ಗಮನಕ್ಕೆ ಬರುತ್ತಲೇ ಪೊಲೀಸರು ಮಧ್ಯ  ಪ್ರವೇಶಿಸಿ ಬಿಗುವಿನ ವಾತಾವರಣ ತಿಳಿ ಗೊಳ್ಳುವಂತಾಯಿತು ಎನ್ನಲಾಗಿದೆ.

ಈ ನಡುವೆ ಒರ್ವ ಗಾಯಾಳು ತಾಲೂಕ  ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಇನ್ನೋರ್ವನೂ ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸಾಧ್ಯತೆ ಕೇಳಿ ಬಂದಿದೆ. ಸಾರ್ವಜನಿಕ ಪ್ರದೇಶ ಅದರಲ್ಲಿಯೂ ಮುಖ್ಯವಾಗಿ ತಾಲೂಕಿನ ಪ್ರಮುಖ ಇಲಾಖೆ ಕಛೇರಿಯ ಆವರಣದಲ್ಲಿ,ಕಛೇರಿ ಅವಧಿಯಲ್ಲಿಯೇ  ನಡೆದ ಈ ಘಟನೆ ಕುರಿತಂತೆ ತಡರಾತ್ರಿ ವರೆಗೂ ಪೊಲೀಸ್ ದೂರು ದಾಖಲಾಗದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾದಂತಿದೆ.

ಹೊಡೆದಾಟ ಮಾಡಿಕೊಂಡವರು ಆಸ್ಪತ್ರೆ ಸೇರುವಂತಾಗಿರುವುದರಿಂದ ಇಲ್ಲವೇ ಇನ್ನಿತರೆ ಕಾರಣಗಳಿಂದ ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆಯೇ ? ಅಥವಾ ಕಾದು ನೋಡುವ ತಂತ್ರ  ಅನುಸರಿಸುತ್ತಿದ್ದಾರೆಯೇ ? ಅವರು ಪರಸ್ಪರ ದೂರು ದಾಖಲಿಸದಿದ್ದರೂ   ಸರ್ಕಾರಿ ಕಚೇರಿ ಆವರಣದಲ್ಲಿ ನಡೆದ ಈ ಆತಂಕಕಾರಿ ಘಟನೆ ಬಗ್ಗೆ ಸಂಬಂಧಿಸಿದ ಇಲಾಖೆಯವರಾದರೂ ದೂರು ದಾಖಲಿಸಬಹುದಿತ್ತಲ್ಲವೇ? ಇಬ್ಬರಿಗೂ ಇರುವ ರಾಜಕೀಯ ಮತ್ತಿತರ ಪ್ರಭಾವ ಪ್ರಕರಣ ದಾಖಲಾಗದಂತೆ ನೋಡಿಕೊಂಡಿತೆ ಎಂಬಿತ್ಯಾದಿ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದು, ಮುಂದೇನಾಗಬಹುದು ಎಂಬ ಕುತೂಹಲ ಹಲವರಲ್ಲಿ ಮೂಡಿ ಬಂದಂತಿದೆ. ಎಫ್ಐ ಆರ್  ದಾಖಲಾತಿ ಕುರಿತು ಡಿಸೆಂಬರ್ 23 ರ ಶುಕ್ರವಾರ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ. ಹೊಡೆದಾಟದ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button