Big News
Trending

ಅಂಕೋಲಾದಲ್ಲಿ 4 ಕರೊನಾ ಕೇಸ್ ದೃಢ?

ಶತಕದ ಸಮೀಪ ತಲುಪಿದ ಸೋಂಕಿತರ ಸಂಖ್ಯೆ.
ರ‍್ಯಾಪಿಡ್ ಆಂಟಿಜನ್ ಕಿಟ್ ಮೂಲಕ ತಾಲೂಕಾಸ್ಪತ್ರೆಯಲ್ಲೇ ಗಂಟಲು ದ್ರವ ಪರೀಕ್ಷೆ
ಹುಲಿದೇವರವಾಡದ ಮತ್ತೆ ಮೂವರಲ್ಲಿ ಪತ್ತೆಯಾಯಿತೇ ಸೋಂಕು?
ಪುರಲಕ್ಕಿಬೇಣದಲ್ಲಿ 1 ಕೇಸ್?

ಅಂಕೋಲಾ: ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ 4ಹೊಸ ಕರೊನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ ಶತಕದ ಸನಿಹ ತಲುಪಿದಂತಾಗಿದೆ (96). ©Copyright reserved by Vismaya tv ಇಂದು ಸೋಂಕಿನಿoದ ಗುಣಮುಖರಾದ ಹಾರವಾಡದ ಇಬ್ಬರು ಮತ್ತು ಬೆಳಂಬಾರದ ಓರ್ವ ಬಾಲಕನನ್ನು ತಾಲೂಕಾ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಹುಲಿದೇವರವಾಡದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಇತ್ತೀಚೆಗೆ ಸೋಂಕಿಗೊಳಪಟ್ಟ ವೃದ್ಧೆಯ ಪ್ರಾಥಮಿಕ ಸಂಪರ್ಕದಿ0ದ ಬಂದಿರಬಹುದೆನ್ನಲಾಗಿದೆ. ಮಂಗಳೂರಿನಲ್ಲಿ ಕೆಲಸಕ್ಕೆ ಇದ್ದ ಎನ್ನಲಾದ ಪುರಲಕ್ಕಿಬೇಣದ 25ರ ಯುವಕನಲ್ಲಿಯೂ ಸೋಂಕು ಪತ್ತೆಯಾಗಿದೆ ಎನ್ನಲಾಗಿದ್ದು ಈ ಕುರಿತು ನಾಳೆಯ ಹೆಲ್ತ್ ಬುಲೆಟಿನ್‌ನಲ್ಲಿ ದೃಢ ಪಡುವ ಸಾಧ್ಯತೆ ಇದೆ.

ಅಂಕೋಲಾ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ರ‍್ಯಾಪಿಡ್ ಆಂಟಿಜನ್ ಕಿಟ್ ಮೂಲಕ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅತೀ ಕಡಿಮೆ ಅವಧಿಯಲ್ಲಿ ಪರೀಕ್ಷಾ ಫಲಿತಾಂಶ ದೊರೆಯುತ್ತಿದೆ. ಇಂದು 108 ಗಂಟಲು ದ್ರವ ಪರೀಕ್ಷೆ ಮಾಡಿದ್ದು ಈವರೆಗೆ ಆಂಟಿಜನ್ ಕಿಟ್ ಬಳಸಿ ಒಟ್ಟೂ 225 ಪರೀಕ್ಷೆಯನ್ನು ತಾಲೂಕಿನಲ್ಲಿಯೇ ಮಾಡಿದಂತಾಗಿದೆ. ಈ ಮೊದಲು ತಾಲೂಕಿನ ಎಲ್ಲಾ ಗಂಟಲು ದ್ರವ ಪರೀಕ್ಷೆಗಳನ್ನು ಕಾರವಾರದ ಕ್ರಿಮ್ಸ್ ಮತ್ತು ಮಂಗಳೂರು ಮತ್ತಿತ್ತರೆಡೆ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು.©Copyright reserved by Vismaya tv

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button