Big NewsImportant
Trending

ಮೋಜು-ಮಸ್ತಿ: ಸಮುದ್ರಕ್ಕಿಳಿದಿದ್ದ ಇಬ್ಬರು ಪ್ರವಾಸಿಗರ ಪ್ರಾಣ ರಕ್ಷಣೆ

ಗೋಕರ್ಣ: ಹೊಸ ವರ್ಷದ ಸಂಭ್ರಮಾಚರಣೆ ಉತ್ತರಕನ್ನಡ ಜಿಲ್ಲೆಯಲ್ಲಿ ಜೋರಾಗಿದ್ದು, ಅದರಲ್ಲೂ ಕಡಲತೀರಗಳಿಗೆ ಜನಸಾಗರವೇ ಹರಿದುಬರುತ್ತಿದೆ. ಇದೇ ವೇಳೆ ಮೋಜು-ಮಸ್ತಿಗಾಗಿ ಬರುವ ಪ್ರವಾಸಿಗರು ಆಳ ಅರಿಯದೇ ನೀರಿಗೆ ಇಳಿದು ಅಪಾಯ ತಂದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದೆ. ಗೋಕರ್ಣ ಮುಖ್ಯ ಕಡಲತೀರದಲ್ಲೂ ಇಂತಹದೇ ಪ್ರಕರಣ ನಡೆದಿದ್ದು, ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರಿಬ್ಬರನ್ನು ರಕ್ಷಣೆ ಮಾಡಲಾಗಿದೆ.

Recruitment 2022: ಕೇಂದ್ರ ಸರ್ಕಾರಿ ಉದ್ಯೋಗ : 400 ಉದ್ಯೋಗಾವಕಾಶ

ಧಾರವಾಡ ಮೂಲದ ಸಿದ್ದಲಿಂಗ ಹಾಗೂ ನಿತೇಶ್ ಎಂಬ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಗೋಕರ್ಣ ಪ್ರವಾಸಕ್ಕೆ ಬಂದ ವೇಳೆ ಇವರು ಮುಖ್ಯ ಕಡಲತೀರದಲ್ಲಿ ಈಜಲು ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದು, ಕೂಡಲೇ ಓಂ ವಾಟರ್ ಸ್ಪೋರ್ಟ್ಸ್ನ ಚಿದಾನಂದ ಲಕ್ಕುಮನೆ, ಬೋಟ್ ಸಹಾಯಕ ದೀಪಕ್ ಗೌಡ ಅವರು ಇವರನ್ನು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಸ್ಮಯ ನ್ಯೂಸ್, ಗೋಕರ್ಣ

Related Articles

Back to top button