Big NewsImportant
Trending

ರಸ್ತೆಯ ಪಕ್ಕ ಪಂಚರ್ ತೆಗೆಯುತ್ತಿದ್ದ ವೇಳೆ ಲಾರಿ ಡಿಕ್ಕಿ: ಚಾಲಕ ದುರ್ಮರಣ

ಕುಮಟಾ: ಅಪಘಾತದಿಂದಾಗಿ ಲಾರಿ ಟೈಯರ್ ನ ಪಂಚರ್ ತೆಗೆಯುತ್ತಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ದುಂಡಕುಳಿ ಬಳಿ ನಡೆದಿದೆ. ಕುಮಟಾ ತಾಲೂಕಿನ ದುಂಡಕುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಂತ ಲಾರಿಯೊಂದು ಪಂಚರ್ ಆಗಿತ್ತು. ಹೀಗಾಗಿ ಲಾರಿ ಚಾಲಕ ರಸ್ತೆಯ ಪಕ್ಕವೇ ಪಂಚರ್ ತೆಗೆಯುವ‌ ಕೆಲಸ ಮಾಡುತ್ತಿದ್ದ. ಇದೇ ವೇಳೆ ಸರಕು ತುಂಬಿಕೊoಡು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ದುರ್ಘಟನೆ ಸಂಭವಿಸಿದೆ.

ಪಿಕ್‌ನಿಕ್ ಗೆ ಬಂದಿದ್ದ SSLC ವಿದ್ಯಾರ್ಥಿ ನೀರು ಪಾಲು? ಗಂಗಾವಳಿ ನದಿ ನೀರಲ್ಲಿ ಕೊಚ್ಚಿ ಹೋದ ಬಾಲಕ

ಅಪಘಾತದ ರಭಸಕ್ಕೆ ಚಾಲಕನ ದೇಹ ಗುರುತುಸಿಗದಂತಾಗಿದೆ. ಪೊಲೀಸರು ಹಾಗೂ ಅಧಿಕಾರಿಗಳು ಮತ್ತು ಸ್ಥಳೀಯರ ಸಹಕಾರ ಪಡೆದು ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button