Focus NewsImportant
Trending

ಹೆದ್ದಾರಿಯಲ್ಲಿ ಹೊತ್ತಿ ಉರಿದ ಸರಕು ಲಾರಿ: ಹಾರಿ ಪ್ರಾಣಾಪಾಯದಿಂದ ಪಾರಾದ ಚಾಲಕ

ಭಟ್ಕಳ: ತಾಂತ್ರಿಕ ಸಮಸ್ಯೆಯಿಂದಾಗಿ ನಿಂತಿದ್ದ ಲಾರಿಯೊಂದು ಹೊತ್ತಿ ಉರಿದ ಘಟನೆ ತಾಲೂಕಿನ ಕಾಮಾಕ್ಷಿ ಪೇಟ್ರೋಲ್ ಪಂಪ್ ಎದುರು ನಡೆದಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊನ್ನಾವರ ಕಡೆಯಿಂದ ಬೈಂದೂರಿನ ಕಡೆಗೆ ಸರಕು ಸಾಗಿಸುತ್ತಿದ್ದ ಲಾರಿಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ರಸ್ತೆಯ ಪಕ್ಕ ಪಂಚರ್ ತೆಗೆಯುತ್ತಿದ್ದ ವೇಳೆ ಲಾರಿ ಡಿಕ್ಕಿ: ಚಾಲಕ ದುರ್ಮರಣ

ಲಾರಿ ಚಾಲಕ ಬೆಂಕಿ ಕಾಣಿಸಿಕೊಂಡ ಲಾರಿಯಿಂದ ಇಳಿದು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದು , ಚಾಲಕನ ಪ್ರಯತ್ನಕ್ಕೆ ಪಕ್ಕದಲ್ಲಿರುವ ಕಾಮಾಕ್ಷಿ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಕೈ ಜೊಡಿಸಿದ್ದರು . ನಂತರ ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸಿದರು. ಅಷ್ಟರಲ್ಲೆ ಸರಕು ಲಾರಿ ಭಾಗಶಃ ಸುಟ್ಟು ಕರಕಲಾಗಿತ್ತು ಎಂದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button