Focus NewsImportant
Trending

ಗಾಯಗೊಂಡಿದ್ದ ಅಪಾರೂಪದ ಹಾರುವ ಅಳಿಲಿನ ರಕ್ಷಣೆ

ಕಾರವಾರ: ಗಾಯಗೊಂಡಿದ್ದ ಹಾರುವ ಅಳಿಲನ್ನು ರಕ್ಷಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಪುನಃ ಕಾಡಿಗೆ ಬಿಟ್ಟಿ ಘಟನೆ ತಾಲೂಕಿನಲ್ಲಿ ನಡೆದಿದೆ.ಇದು ಮರಿ ಹಾರುವ ಅಳಿಲಾಗಿದ್ದು, ಮರದಿಂದ ಮರಕ್ಕೆ ಹಾರುವ ವೇಳೆ ಆಕಸ್ಮಾತಾಗಿ ಮಲ್ಲಾಪುರ ಟೌನ್‍ಶಿಪ್‍ನ ಎನ್‍ಪಿಸಿಐಎಲ್ ಸಿಬ್ಬಂದಿಯೋರ್ವರ ಮನೆಯ ಟೆರೇಸ್ ಮೇಲೆ ಬಿದ್ದಿತ್ತು ಎನ್ನಲಾಗಿದೆ.

ಈ ಬಗ್ಗೆ ಸ್ಥಳೀಯರು ಅರಣ್ಯ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ನಾಗರಾಜ್ ಅವರು ಬಿಲಾಲ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ತೆರಳಿ ಹಾರುವ ಅಳಿಲಿಗೆ ಅಗತ್ಯ ಚಿಕಿತ್ಸೆ ನೀಡಿ, ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣಕರ್ ಅವರ ಮಾರ್ಗದರ್ಶನದಲ್ಲಿ ಪುನಃ ಕಾಡಿಗೆ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹಾರುವ ಅಳಿಲುಗಳು ಸಂಪೂರ್ಣವಾಗಿ ನಿಶಾಚರಿಯಾಗಿದ್ದು, ಹಗಲಿನಲ್ಲಿ ಗೋಚರಿಸುವುದು ತುಂಬಾ ವಿರಳವಾಗಿದೆ. ಈ ಅಳಿಲಿನ ಪೆಟಾಜಿಯಂಗೆ (ಕಾಲುಗಳ ಪೊರೆ) ಆಕಸ್ಮಿಕವಾಗಿ ಗಿಡಮರಗಳು ತಾಗಿ ಗಾಯಗೊಂಡ ಪರಿಣಾಮ ಹಾರಲಾಗದೇ ಮನೆಯ ಬಳಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button