Focus News
Trending

ಸುಮಾರು 40 ಜನ ಗುತ್ತಿಗೆದಾರರು ಒಂದೆಡೆ ಸೇರಿ ಜೊಯಿಡಾ ತಾಲೂಕಿನ ಸುಪಾ ತಾಲೂಕಾ ಗುತ್ತಿಗೆದಾರರ ಸಂಘ  (ರಿ) ಸಂಘ ನೊಂದಣಿ

ಜೊಯಿಡಾ:  ಸುಮಾರು 40 ಜನ ಗುತ್ತಿಗೆದಾರರು ಒಂದೆಡೆ ಸೇರಿ ಜೊಯಿಡಾ ತಾಲೂಕಿನ ಸುಪಾ ತಾಲೂಕಾ ಗುತ್ತಿಗೆದಾರರ ಸಂಘ  (ರಿ) ಸಂಘವನ್ನು ನೊಂದಣಿ ಮಾಡಿಕೊಂಡಿದ್ದೇವೆ. ನಾವು ಜೊಯಿಡಾ ತಾಲೂಕಿನ ಕಾಮಗಾರಿಗಳನ್ನು ಮಾತ್ರ ಮಾಡುತ್ತಿದ್ದಾರೆ. ಇಲ್ಲಿನ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅಡೆತಡೆಯ ನಡುವೆ ಕಾಮಗಾರಿ ನಡೆಸುತ್ತಿದ್ದೇವೆ. ಶೇ 30- 35 ಕಡಿಮೆ ಮೊತ್ತಕ್ಕೆ ಹೊರಗಿನವರು ಟೆಂಡರ್ ಹಾಕಿದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಕಷ್ಟ ಹಾಗೂ ನಮ್ಮ ತಾಲೂಕಿನ ಗುತ್ತಿಗೆದಾರರು ಕೆಲಸ ಇಲ್ಲದೆ ತೊಂದರೆಗೆ ಸಿಲುಕುತ್ತಾರೆ . ಹೊರ ತಾಲೂಕಿನ ಗುತ್ತಿಗೆದಾರರು ಇಲ್ಲಿ ಇಲ್ಲಿನ ಕಾಮಗಾರಿಗೆ ಟೆಂಡರ್ ಹಾಕದೆ ಸಹಕಾರ ನೀಡಬೇಕು ಎಂದು  ಸುಪಾ ಗುತ್ತಿಗೆದಾರರ ಸಂಘದ ತಾಲೂಕಾಧ್ಯಕ್ಷ ಮಂಗೇಶ ಕಾಮತ ಹೇಳಿದರು.

ಅವರು ಸೊಮವಾರ ಜೊಯಿಡಾದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸುಪಾ ತಾಲೂಕಾ ಗುತ್ತಿಗೆದಾರರ ಸಂಘ  (ರಿ)  ಕಾರ್ಯದರ್ಶಿ ಅಂತೋನಿ ಜಾನ್ ಮಾತನಾಡಿ ಹೊರ ತಾಲೂಕಿನವರು ಟೆಂಡರ್ ಅನ್ನು ಕಡಿಮೆ ಮೊತ್ತಕ್ಕೆ ಟೆಂಡರ ಹಾಕುವ ಮೂಲಕ ಕಳಪೆ ಕಾಮಗಾರಿಗೆ ಕಾರಣರಾಗುತ್ತಿದ್ದಾರೆ. ಮತ್ತು ಇಲ್ಲಿನ ಯುವ ಗುತ್ತಿಗೆದಾರರು ಕೆಲಸ ಇಲ್ಲದೆ ತೊಂದರೆಯಲ್ಲಿದ್ದಾರೆ. ಹಾಗಾಗಿ ೭೫ ಲಕ್ಷಕ್ಕಿಂತ ಒಳಗಿನ ಟೆಂಡರ್ ಕಾಮಗಾರಿಗೆ ತಾಲೂಕಿನ ಗುತ್ತಿಗೆದಾರರ ಬಿಟ್ಟು ಹೊರಗಿನವರು ಟೆಂಡರ್ ಹಾಕಬೇಡಿ ಎಂದು ಪಕ್ಕದ ತಾಲೂಕಿನ ಗುತ್ತಿಗೆದಾರರಿಗೆ ಮನವಿ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಬದಲ್ಲಿ ಸುಪಾ ತಾಲೂಕಾ ಗುತ್ತಿಗೆದಾರರ ಸಂಘ  ಮಂಗೇಶ ಕಾಮತ,ಉಪಾಧ್ಯಕ್ಷ ರಾಜಾರಾಮ ದೇಸಾಯಿ,ಸಂತೋಷ ಮಂಥೆರೋ,ಕಾರ್ಯದರ್ಶಿ ಅಂಥೊನಿ ಜಾನ್,ಸಹ ಕಾರ್ಯದರ್ಶಿ ತುಷಾರ ಸುಂಠಣಕರ,ಚoದ್ರಕಾoತ ದೇಸಾಯಿ, ಖಜಾಂಚಿ ಶಾಮ ಪೋಕಳೆ, ಸತೀಷ ದೇಸಾಯಿ,ದತ್ತಾ ನಾಯ್ಕ,ರತ್ನಾಕರ ದೇಸಾಯಿ,ವಿನಯ ದೇಸಾಯಿ, ಚಂದ್ರಕಾoತ ದೇಸಾಯಿ,ದಿಗಂಬರ ದೇಸಾಯಿ,ಗಜಾನನ ದೇಸಾಯಿ,ನಂದು ತೇಲಿ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಜೋಯ್ಡಾ

Back to top button