Focus NewsImportant
Trending

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ವಾಹನ ಡಿಕ್ಕಿ: ಸ್ಥಳದಲ್ಲೇ ಮೂವರು ಮಹಿಳೆಯರ ದುರ್ಮರಣ

ಜೊಯಿಡಾ: ಹುಬ್ಬಳ್ಳಿ-ಗೋವಾ ಮಾರ್ಗದಲ್ಲಿ ರಾಮನಗರದ ಸೀತಾವಾಡ ಎಂಬಲ್ಲಿ ಗೋವಾ ಕಡೆಗೆ ಹೊರಟಿದ್ದ ವಾಹನ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಜನರಿಗೆ ಡಿಕ್ಕಿ ಹೊಡೆದ ಪರಿಣಾಮ ಘಾರ್ಲಿ (ಖಾನಾಪುರ) ಮೂಲದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವೇಳೆಯಲ್ಲಿ ರಾಮನಗರ ಪೊಲೀಸರು ವಾಹನದಲ್ಲಿದ್ದ ತಮಿಳುನಾಡು ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದಲ್ಲಿ ಘಾರ್ಲಿಯ ಪಾರ್ವತಿ ಗಾವಡಾ, ದುರ್ಗೆ ಕೋಲ್ಸೇಕರ, ತುಳಸಿ ಗಾವಡಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಾಮನಗರದ ಪಿಗ್ಮಿ ಏಜೆಂಟ್ ವಿಪಿನ ತಾಳ್ವೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಾಗೂ ರಾಮನಗರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಮಿಳುನಾಡಿನಿಂದ ಪ್ರವಾಸಕ್ಕಾಗಿ ಗೋವಾಕ್ಕೆ ತೆರಳುತ್ತಿದ್ದ ಮಹೀಂದ್ರಾ ಬೊಲೆರೊ ವಾಹನ ನಡೆದುಕೊಂಡು ಹೋಗುತ್ತಿದ್ದ 4 ಜನರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಧಾರವಾಡದಿಂದ ರಾಮನಗರ ಮಾರ್ಗವಾಗಿ ಗೋವಾದತ್ತ ಹೊರಟಿದ್ದ ತಮಿಳುನಾಡು ರಾಜ್ಯದ ನೊಂದಣಿಯ ಬೊಲೇರೋ ವಾಹನ ಬೆಳಗಾವಿ-ಉತ್ತರ ಕನ್ನಡ ಜಿಲ್ಲೆಗಳ ಗಡಿಯ ರಾಮನಗರ ಗ್ರಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿoದ ಅತಿವೇಗದಿಂದ ಬಂದು ರಸ್ತೆ ಬದಿ ಸಾಗುತ್ತಿದ್ದ ನಾಲ್ವರು ಮಹಿಳೆರಿಗೆ ಮತ್ತು ಓರ್ವ ಪುರುಷನಿಗೆ ಹಿಂದಿನಿoದ ಗುದ್ದಿದೆ.

ಅಪಘಾತದ ತೀವ್ರತೆಗೆ ಖಾನಾಪುರ ತಾಲ್ಲೂಕು ಘಾರ್ಲಿ ಗ್ರಾಮದ ಮಹಿಳೆಯರಾದ ದುರ್ಗಾ ಭುಜಂಗ ಕಾಳಸೇಕರ (60), ತುಳಸಿ ತಮ್ಮಣ್ಣ ಗಾವಡೆ (50) ಮತ್ತು ಪಾರ್ವತಿ ಚೂಡಪ್ಪ ಗಾವಡೆ (55) ಸ್ಥಳದಲ್ಲೇ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ. ಅಪಘಾತದ ಬಳಿಕ ಸ್ಥಳೀಯರು ಬೊಲೇರೋ ವಾಹನವನ್ನು ತಡೆದು ವಾಹನದಲ್ಲಿದ್ದ ಚಾಲಕ ಮತ್ತು ಇತರೆ ಪ್ರಯಾಣಿಕರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button