Focus News
Trending

ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ದಬಗಾರ್ ಗೆ ಕೋಕ್ : ದೇಸಾಯಿಗೆ ಅವಕಾಶ

ಜೊಯಿಡಾ: ಜೊಯಿಡಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಯುವ ಮುಖಂಡ  ಮರಾಠಾ ಸಮಾಜದ ವಿನಯ ದೇಸಾಯಿ ಆಯ್ಕೆಯಾಗಿದ್ದಾರೆ. ಕಳೆದ 17 ವರ್ಷಗಳಿಂದ ಜೊಯಿಡಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷನಾಗಿ ಸದಾನಂದ ದಬಗಾರ ಕಾರ್ಯ ನಿರ್ಹಸಿದ್ದು,ಈಗ ವಿನಯ ದೇಸಾಯಿ ಆಯ್ಕೆಯಾಗಿರುವುದಕ್ಕೆ ಕಾಂಗ್ರೇಸ್ ವಲಯದಲ್ಲಿ ಸಂಚನಲನ ಮೂಡಿಸಿದೆ. ಕಾಂಗ್ರೇಸ್ ಪಕ್ಷ ಸಂಘಟನೆ ಚುರುಕು ಗೊಳಿಸಲು ಜಿಲ್ಲಾ ಹಾಗೂ ಹಳಿಯಾಳ ಕ್ಷೇತ್ರದ ಎಲ್ಲಾ ತಾಲೂಕಾ ಮಟ್ಟದ ಎಲ್ಲ ಹಳೆಯ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಅಧಿಕೃತವಾಗಿ ಮುಂದಿನವಾರ ಪದಗ್ರಹಣ ಸಮಾರಂಭ ನಡೆಯಲಿದೆ.

ವಿಸ್ಮಯ ನ್ಯೂಸ್, ಜೋಯ್ಡಾ

Related Articles

Back to top button