Important
Trending

ಅತ್ಯಂತ ವಿಜೃಂಭಣೆಯಿoದ ನಡೆದ ಕುಮಟಾ ಜಾತ್ರೆ : ಮಹಾರಥೋತ್ಸವ ಕಣ್ತುಂಬಿಕೊoಡ ಭಕ್ತರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕುಮಟಾ ಪಟ್ಟಣದ ಹೃದಯ ಭಾಗದ ರಥಬೀದಿಯಲ್ಲಿ ಶತ ಶತಮಾನಗಳ ಭವ್ಯ ದಿವ್ಯ ಪರಂಪರೆ ಹೊಂದಿದ ಜಾಗೃತ ಸ್ಥಾನ ಶ್ರಿ ವೆಂಕಟರಮಣ ದೇವಾಲಯ. ಸಮಸ್ತ ಭಕ್ತಾದಿಗಳ ಸಂಕಷ್ಟ ನಿವಾರಣೆ ಮಾಡುವ ಶ್ರಿಮನ್ನಾರಾಯಣ ಸ್ವರೂಪಿ ಶ್ರೀ ವೆಂಕಟರಮಣ ದೇವರ ಮಹಾರಥೋತ್ಸ, ಅಂದರೆ ಕುಮಟಾ ಜಾತ್ರೆಯು ಅತ್ಯಂತ ವಿಜ್ರಂಭಣೆಯಿoದ ಧಾರ್ಮಿಕ ವಿದಿ ವಿದಾನದಂತೆ ಸಂಪನ್ನಗೊoಡಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು ಮಹಾರಥೋತ್ಸವವನ್ನು ಕಣ್ತುಂಬಿಕೊoಡರು.

ಶ್ರೀ ವೆಂಕಟರಮಣ ದೇವರ ಮಹಾರಥೋತ್ಸವದ ಪ್ರಯುಕ್ತ ವೆಂಕಟೇಶ್ವರನಿಗೆ ಹರಕೆ ತೀರಿಸಲೆಂದು ದೂರದ ಊರುಗಳಿಂದ ಆಗಮಿಸಿದ ಭಕ್ತಾಧಿಗಳು ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು. ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿದ್ದು, ಬಳಿಕ ಸಂಜೆಯ ವೇಳೆ ಮಹಾರಥೋತ್ಸವ ಸಂಪನ್ನಗೊoಡಿತು. ತಾಲೂಕು ಸೇರಿದಂತೆ ಜಿಲ್ಲೆಯ ವಿವಿದ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು, ರಥ ಎಳೆದು ಕೃತಾರ್ಥರಾದರು

ಈ ಸಂದರ್ಭದಲ್ಲಿ ಕುಮಟಾ ಪಟ್ಟಣದ ಶ್ರೀ ಶಾಂತೇರಿ ಕಆಮಾಕ್ಷಿ ದೇವಾಲಯದ ಆಡಳಿತ ಮಂಡಳಿಯ ಮೋಕ್ತೆಸರರಾದ ಶೇಷಗಿರಿ ಶಾನಭಾಗ ಅವರು ವಿಸ್ಮಯ ವಾಹಿನಿಯೊಂದಿಗೆ ಮಾತನಾಡಿ, ಕುಮಟಾ ಜಾತ್ರೆಯ ವಿಶೇಷವಾಗಿ ಮಾರ್ಗಶುದ್ಧ ಚೌತಿಯಿಂದ 3 ದಿನಗಳ ಕಾಲ ಪುಷ್ಪ ರಥೋತ್ಸವ ಕಾರ್ಯಕ್ರಮ ಸೇರಿದಂತೆ ಶ್ರೀ ವೆಣಕಟರಮಣ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊoಡಿದೆ. ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗುರುಗಳಾದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮಿಜಿಯವರು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಒಟ್ಟಾರೆ ಶ್ರೀ ವೆಂಕಟರಮಣ ದೇವರ ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೋಂಡು ಶ್ರೀ ದೆವರ ಆಶಿರ್ವಾದಕ್ಕೆ ಪಾತ್ರರಾದರು, ಸಿಹಿ ತಿಂಡಿಗಳ ಅಂಗಡಿ ಸೇರಿದಂತೆ ಮುಂತಾದ ವ್ಯಾಪಾರ ಮಳಿಗೆಗಳು ಭಾರಿ ಪ್ರಮಾಣದಲ್ಲಿ ಆಗಮಿಸಿತ್ತು.

ವಿಸ್ಮಯ ನ್ಯೂಸ್. ಯೋಗೇಶ ಮಡಿವಾಳ. ಕುಮಟಾ.

Back to top button