![](http://i0.wp.com/vismaya24x7.com/wp-content/uploads/2023/02/accident.jpg?fit=1280%2C720&ssl=1)
ಸಿದ್ದಾಪುರ: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಅಲೋಕ ಪರಮೇಶ್ವರ ಭಟ್ ಕಲಗದ್ದೆ (30) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ತಾಲೂಕಿನ ನಾಣಿಕಟ್ಟಾ ಬಳಿ ಈ ಭೀಕರ ಅಪಘಾತ ನಡೆದಿದ್ದು, ಗಾಯಳುವನ್ನು ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬoಧಿಸಿದoತೆ ಲಾರಿ ಚಾಲಕ ನಾಗರಾಜ್ ಮೋಹನ ದೇವಾಡಿಗ ಮಂಜಳ್ಳಿ ಶಿರಸಿ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](http://i0.wp.com/vismaya24x7.com/wp-content/uploads/2021/11/rooping.jpg?resize=708%2C398&ssl=1)
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ