ಕವಲಕ್ಕಿಯ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರ: 11 ವಿಭಾಗದ ತಜ್ಞ ವೈದ್ಯರು ಭಾಗಿ
ಹೊನ್ನಾವರ: ವೆಂಕಟ್ರಮಣ ಹೆಗಡೆ ಕವಲಕ್ಕಿ ಯವರ ಶ್ರೀಕುಮಾರ ಸಾರಿಗೆ ಸಂಸ್ಥೆಯ ಸೇವಾ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಸಂಸ್ಥೆ, ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹೊನ್ನಾವರ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ದೀಫ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ ತಾವು ಬೆಳೆದ ಹಾಗೇ ಸಮಾಜ ಬೆಳೆಯಲು ಹಲವು ಸಮಾಜಮುಖಿ ಕಾರ್ಯವನ್ನು ಶ್ರೀಕುಮಾರ ಸಂಸ್ಥೆ ಆಯೋಜಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಬಿರದ ಆಯೋಜಕರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಜೊತೆ ಈ ಭಾಗದವರಿಗೆ ಅನೂಕೂಲವಾಗಲಿ ಎಂದು ಈ ಶಿಬಿರ ಆಯೋಜಿಸುವ ಮೂಲಕ ಯಶ್ವಸಿಯಾಗಿದೆ. ಶಿಬಿರ ಯಶ್ವಸಿಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ವಾಸಂತಿ ಅಮೀನ್ ಮಾತನಾಡಿ ಯೋಜನೆಯು ಹಲವು ಕಾರ್ಯಕ್ರಮ ಆಯೋಜಿಸಿತ್ತಾ ಬಂದಿದ್ದು, ಜ್ಞಾನವಿಕಾಸ ಘಟಕದ ವತಿಯಿಂದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಾಗಿದೆ. ಇಂದಿನ ದಿನಮಾನದಲ್ಲಿ ವೈದ್ಯಕೀಯ ಸೌಲಭ್ಯ ಸುಲಭವಾಗಿಲ್ಲ. ಆದರೆ ನುರಿತ ವೈದ್ಯರ ಜೊತೆ ಉಚಿತ ಬಸ್ ಸೇವೆ ಮೂಲಕ ಶಿಬಿರದ ಕರೆ ತರುವ ಕಾರ್ಯ ನಡೆದಿರುವುದು ವಿಶೇಷತೆಯಿಂದ ಕೂಡಿದೆ ಎಂದರು.
ಕಸ್ತೂರ್ಬಾ ಆಸ್ಪತ್ರೆಯ ಅಸಿಸ್ಟಂಟ್ ಪ್ರೋಪೇಸರ್ ಡಾಕ್ಟರ ನಿಶಾ ಶೇಣೈ ಶಿಬಿರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಮಣೆಪಾಲ ಕಸ್ತೂರ್ಬಾ ಆಸ್ಪತ್ರೆಯ ಅಸಿಸ್ಟಂಟ್ ಪ್ರೋಪೇಸರ್ ಡಾಕ್ಟರ ನಿಶಾ ಶೇಣೈ, ವೈದ್ಯರಾದ ಡಾ. ಸಂದೀಪ, ಸೂರ್ಯನಾರಾಯಣ ಹೆಗಡೆ, ಶಂಭು ಸಂತನ್ ಕಾಲೇಜಿನ ಪ್ರಾಚಾರ್ಯ ವಿ.ಆಯ್.ನಾಯ್ಕ, ಉಪಸ್ಥಿತರಿದ್ದರು. 11 ವಿಭಾಗದ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರತಿಯೊರ್ವರಿಗೂ ಬಿ.ಪಿ.ಶುಗರ್ ತಪಾಸಣೆ ಕಾರ್ಯ ಜರುಗಿತು. ತಾಲೂಕಿನ ವಿವಿಧಡೆಯಿಂದ ಅಪಾರ ಸಂಖ್ಯೆಯ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.
ವಿಸ್ಮಯ ನ್ಯೂಸ್, ಹೊನ್ನಾವರ