Follow Us On

WhatsApp Group
Focus NewsImportant
Trending

ಕುಮಟಾ ಹೊನ್ನಾವರದಲ್ಲಿ ಕರಾವಳಿ ಪ್ರಜಾಧ್ವನಿ ಯಾತ್ರೆೆ : ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ ಕೈ ಪಡೆ

ಕುಮಟಾ: ವಿಧಾನ ಪರಿಷತ್ ವಿರೋದ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು, ಹಾಲಿ ಶಾಸಕರಾದ ಆರ್.ವಿ ದೇಶಪಾಂಡೆ ಅವರ ನೇತೃತ್ವದಲ್ಲಿ ಕರಾವಳಿ ಪ್ರಜಾಧ್ವನಿ ಯಾತ್ರೆÉ ಕಾರ್ಯಕ್ರಮವನ್ನು ಇಂದು ಕುಮಟಾ ತಾಲೂಕಿನ ಗೋಕರ್ಣ ಮತ್ತು ಮಿರ್ಜಾನ ಜಿಲ್ಲಾ ಪಂಚಾಯತ್ ವ್ಯಾಪ್ತಿ, ಹೆಗಡೆ ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ಕುಮಟಾ ಪುರಸಭೆ ವ್ಯಾಪ್ತಿ, ಮೂರೂರು ದೇವಗಿರಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಹಾಗೂ ಹಳದೀಪುರ, ಮುಗ್ವಾ, ಹೊನ್ನಾವರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಉಧ್ಘಾಟನೆಯನ್ನು ಆರ್.ವಿ ದೇಶಪಾಂಡೆ ಅವರು ದೀಪ ಬೆಳಗುವ ಮೂಲಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 16 ಶಾಸಕರು ನಮಗೆ ದ್ರೋಹ ಬಗೆದಿದ್ದಾರೆ. ಅಂತೆಯೇ ಜೆ.ಡಿ.ಎಸ್ ನ 3 ಶಾಸಕರು ದ್ರೋಹ ಮಾಡಿದ್ದಾರೆ. ಆದ ಕಾರಣ ಬಿ.ಜೆ.ಪಿ ಸರ್ಕಾರವು 19 ಜನ ದ್ರೋಹಿಗಳನ್ನು ಕರೆದುಕೊಂಡು ಆಡಳಿತಕ್ಕೆ ಬಂದ ಅಪವಿತ್ರ ಸರ್ಕಾರವಾಗಿದೆ. ಇಂದಿನ ಸರ್ಕಾರದ ಬೆಲೆ ಏರಿಕೆಯಿಂದಾಗಿ ಸಮಾಜ್ಯ ಜನ ಸೇರಿದಂತೆ ಮಧ್ಯಮ ವರ್ಗದ ಜನರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಮತದಾರರ ಮೇಲೆ ಹೆಚ್ಚಿನ ಜವಾಬ್ಧಾರಿಯಿದ್ದು, ಮತದಾರರು ಮತ ಚಲಾಯಿಸುವ ಮುನ್ನ ಕಾಂಗ್ರೆಸ್ ಸಕಾರ ಆಡಳಿತದಲ್ಲಿದ್ದ ತಮ್ಮ ಪರವಾಗಿ ಎಷ್ಟು ಯೋಜನೆಗಳಿದ್ದವು ಹಾಗೂ ಇದೀ ಬಿ.ಜೆ.ಪಿ ಸರ್ಕಾರದಲ್ಲಿ ಎಷ್ಟು ಜನಪರ ಯೋಜನೆಗಳಿವೆ ಎಂಬುದನ್ನು ಯೋಚಿಸಿ ಮತ ಚಲಾಯಿಸಬೇಕಿದೆ ಎಂದರು.

ಈ ವೇಳೆ ರಾಜ್ಯ ಎ.ಐ.ಸಿ.ಸಿ ಕಾರ್ಯದರ್ಶಿಗಳಾದ ಐವನ್ ಡಿಸೋಜಾ ಅವರು ಮಾತನಾಡಿ, 2013 ರಿಂದ 18 ರ ವರೆಗೆ ಸಿದ್ಧರಾಮಯ್ಯನವರ ಸರ್ಕಾರ ಹಾಕಿಕೊಂಡ ಜನಪರ ಯೋಜನೆಗಳನ್ನು ಮುಂದುವರೆಸಿಕೊAಡು ಹೋಗುವ ಯೋಗ್ಯತೆಯೂ ಸಹ ಬಿ.ಜೆ.ಪಿ ಸರ್ಕಾರಕ್ಕೆ ಇಲ್ಲದಿರುವುದು ಬೇಸರದ ಸಂಗತಿ ಎಂದರು. ಈ ಸಂದರ್ಭದಲ್ಲಿ ಕರಾವಳಿ ಪ್ರಜಾಧ್ವನಿಯ ಸಹ ಸಂಚಾಲಕರಾದ ಮಂಜುನಾಥ ಭಂಡಾರಿ ಅವರು ಮಾತನಾಡಿ, ಕರಾವಳಿ ಪ್ರಜಾಧ್ವನಿಯ ಕಾರ್ಯಕ್ರಮದ ಆಯೋಜನೆಯ ಕುರಿತಾಗಿ ಸಂಕ್ಷಿಪ್ತ ವಿವರಣೆ ನೀಡಿದರು.

ಈ ವೇಳೆ ವಿಧಾನ ಪರಿಷತ್ ವಿರೋದ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್ ಅವರು ಮಾತನಾಡಿ, ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಪ್ರತಿ ಮೆನಗೂ 200 ಯುನಿಟ್ ವಿದ್ಯುತ್‌ಶಕ್ತಿ ಯನ್ನು ಉಚಿತವಾಗಿ ನೀಡುವುದು, ಪ್ರತಿ ಕುಟುಂಬದ ಮಹಿಳೆಗೆ 2 ಸಾವಿರ ಹಣ ವಿತರಣೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲಾ ಯೋಜನೆಯ ಮಾಹಿತಿಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯವನ್ನು ನಮ್ಮ ಪಕ್ಷದ ವತಿಯಿಂದ ಮಾಡಲಾಗುತ್ತದೆ. ಅಂತೆಯೇ ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕರು ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವರಾದ ಮಾರ್ಗರೇಟ್ ಆಳ್ವಾ, ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ನಿವೇದಿತ ಆಳ್ವಾ, ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ, ಸತೀಶ ಸೈಲ್, ಮಂಕಾಳ ವ್ಯದ್ಯ, ಮುಖಂಡರಾದ ಹೊನ್ನಪ್ಪ ನಾಯಕ, ಮಂಜುನಾಥ ನಾಯ್ಕ, ಭುವನ ಭಾಗ್ವತ್, ರತ್ನಾಕರ ನಾಯ್ಕ, ಯಶೋದರ ನಾಯ್ಕ ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button