Follow Us On

WhatsApp Group
Important
Trending

ಹೊತ್ತಿ ಉರಿದ ತಹಶೀಲ್ದಾರ್ ಕಾರ್ಯಾಲಯದ ಟ್ರಾನ್ಸ್ ಫರ್ಮರ್ : ಸರ್ಕಲ್ ಪಕ್ಕದಲ್ಲಿಯೂ ಇದೆ ಅಪಾಯಕಾರಿ ವಿದ್ಯುತ್ ಪರಿವರ್ತಕ

ಅಂಕೋಲಾ: ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿರುವ ವಿದ್ಯುತ್ ಪರಿವರ್ತಕ (ಟ್ರಾನ್ಸ್ ಫರ್ಮರ್ )ಆಗಾಗ ಸುದ್ದಿಯಾಗುತ್ತಲೇ ಇರುತ್ತಿದ್ದು, ರಾತ್ರಿ ಆಕಸ್ಮಿಕ ಬೆಂಕಿಯಿoದ ಹೊತ್ತಿ ಉರಿಯುವ ಮೂಲಕ ಮತ್ತೆ ಸುದ್ದಿ ಆಗುವಂತಾಗಿದೆ. ಜೈ ಹಿಂದ್ ಮೈದಾನದಲ್ಲಿ ನಡೆಯುತ್ತಿರುವ ಅಂಕೋಲಾ ಉತ್ಸವಕ್ಕೆ ಇಂದು ಕೊನೆಯ ದಿನವಾಗಿದ್ದು,ಸರ್ಕಲ್ ಎದುರಿನ ಮುಖ್ಯ ರಸ್ತೆಯಲ್ಲಿದ್ದವರು ಮತ್ತು ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿದ್ದವರು ವಿದ್ಯುತ್ ಟ್ರಾನ್ಸ ಪರ್ಮರನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಗಮನಿಸಿ ಇತರರಿಗೂ ವಿಷಯ ತಿಳಿಯುವಂತಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಹೆಸ್ಕಾಂ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ಪಕ್ಕದಲ್ಲಿ ಇರುವ ಸಾಗವಾನಿ ಮರಗಳಿಂದ ಉದುರಿದ ಒಣ ಎಲೆ ಟ್ರಾನ್ಸ್ಫರ್ಮರ್ ಮೇಲೆ ಸಂಗ್ರಹಗೊAಡು ನಂತರ ಬೆಂಕಿ ಮತ್ತಷ್ಟುಹತ್ತಿ ಉರಿಯಲು ಕಾರಣ ಎನ್ನಲಾಗಿದ್ದು,ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುರಕ್ಷಿತ ಕ್ರಮ ಕೈಗೊಂಡರು.ಅದೃಷ್ಟವಶಾತ್ ಇತರ ಯಾವುದೇ ಹಾನಿ ಹಾಗೂ ಅಪಾಯ ಸಂಭವಿಸಿಲ್ಲ. ಈ ಹಿಂದೆ ಉಳುವರ ಕಾರ್ಯಕ್ರಮ ಒಂದಕ್ಕೆ ಕಾನೂನು ಸಚಿವರು ಬಂದಿದ್ದ ದಿನವೇ ,ತಹಶೀಲ್ದಾರ್ ಕಾರ್ಯಾಲಯದ ಇದೇ ವಿದ್ಯುತ್ ಪರಿವರ್ತಕದ ಮೇಲೆ ಮಂಗ ಒಂದು ಸಿಲುಕಿಕೊಂಡು ಮೃತಪಟ್ಟಿದ್ದನ್ನು ಸ್ಮರಿಸಬಹುದಾಗಿದೆ.

ಅದೇ ರೀತಿ ಸರ್ಕಲ್ ಪಕ್ಕದ ಪೊಲೀಸ್ ಠಾಣೆ ಮುಖ್ಯ ತಿರುವಿನ ಬಳಿ ಒಂದು ವಿದ್ಯುತ್ ಪರಿವರ್ತಕವಿದ್ದು,ಇಲ್ಲಿಯೂ ಆಗಾಗ ಸಣ್ಣಪುಟ್ಟ ಬೆಂಕಿಗಳು ಕಾಣಿಸಿಕೊಳ್ಳುತ್ತಿರುತ್ತದೆ.ಅದರಡಿಯೇ ಬೀದಿ ಬದಿ ವ್ಯಾಪಾರದ ಹೆಸರಿನಲ್ಲಿ ಖಾಯಂ ವ್ಯಾಪಾರ- ವಹಿವಾಟು ನಡೆಸಲು ಪುರಸಭೆ ಅನುಮತಿ ನೀಡಿದಂತಿದೆ. ಅಪಾಯದ ಅರಿವಿದ್ದೂ ಸಂಬoಧಿಸಿದ ಕೆಲವು ಇಲಾಖೆಗಳು ಇವನ್ನೆಲ್ಲ ನೊಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಂತಿದೆ. ಒಂದೊಮ್ಮೆ ಇಲ್ಲಿ ಏನಾದರೂ ಅನಾಹುತವಾದರೆ ಹೊಣೆ ಯಾರು ಎನ್ನುವುದಕ್ಕೆ ಸಂಬAಧಿಸಿದವರೆ ಉತ್ತರಿಸಬೇಕಿದೆ. ಸುರಕ್ಷತೆ ದೃಷ್ಟಿಯಿಂದ ವಿದ್ಯುತ್ ಪರಿವರ್ತಕವನ್ನೇ ಬೇರೆಡೆ ಸ್ಥಳಾಂತರಿಸಲಿ ಅಥವಾ ಅಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಗೆ ಬೇರೆ ಸುರಕ್ಷಿತ ಸ್ಥಳ ನಿಗದಿಗೊಳಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಂಬoಧಿಸಿದವರು ಮುಂದಾಗಲಿ ಎಂದು ಪ್ರಜ್ಞಾವಂತರು ಅಗ್ರಹಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button