Follow Us On

WhatsApp Group
Focus NewsImportant
Trending

ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ : ಬಂದೂಕು ತೋರಿಸಿದ ಬಳಿಕ ಓಡಿಹೋದ ಕಳ್ಳ

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ದೃಶ್ಯ

ಶಿರಸಿ: ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದು, ಕಳ್ಳತನಕ್ಕೆ ಯತ್ನಿಸಿದ್ದಾನೆ. ಹೌದು, ತಾಲೂಕಿನ ಮಂಡೆಮನೆಯ ಮನೆಯೊಂದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಮದುವೆಗೆ ಕರೆಯಲು ಬಂದಿದ್ದಾಗಿ ಹೇಳಿಕೊಂಡು ಮನೆ ಬಾಗಿಲು ತಟ್ಟಿದ್ದಾನೆ. ಊರಿನವರು ಅಥವಾ ದೂರದ ಸಂಬoಧಿಕರು ಇರಬಹುದು ಎಂದು ಮನೆಯವರು ಬಾಗಿಲು ತೆರೆದಾಗ ಕಳ್ಳ ಕರಾಮತ್ತು ತೋರಿಸಿದ್ದಾನೆ.

ಬಾವಿಗೆ ಬಿದ್ದು ಮೃತ ಪಟ್ಟ ಶಿಕ್ಷಕಿ : ಶಾಲೆಯಲ್ಲಿ ಮೌನಾಚರಣೆ

ಈ ವೇಳೆ ತಕ್ಷಣ ಚಾಕುವಿನಿಂದ ಮನೆಯ ಯಜಮಾನನ ಮೇಲೆ ಹಲ್ಲೆ ನಡೆಸಿದ್ದು ಅವರ ಕೈಗೆ ಗಾಯವಾಗಿದೆ. ಈ ಗಲಾಟೆ ಕೇಳಿ ಅವರ ಮಗ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಬಂದಿದ್ದಾರೆ. ಆಗ ಮಗ ಬಂದೂಕು ತರುತ್ತಿದ್ದಂತೇ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳ್ಳ ಮನೆಗೆ ಬಂದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆ ಮಾಲೀಕ ಕೂಡಲೇ ಶಿರಸಿ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button