Focus NewsImportant
Trending

ಗಾಂಜಾ ಮಾರಾಟ: ಕುಮಟಾ, ಭಟ್ಕಳದಲ್ಲಿ ಆರೋಪಿಗಳ ಬಂಧನ

ಭಟ್ಕಳ: ಮ್ಯಾಂಗೋ ಫಾರ್ಮ್ ಹೌಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಜಿಬೀವುಲ್ಲಾ ಮುಜಿಬಲ್ಲಾ ಶೇಕ್ ಬದ್ರಿಯಾ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ. ಈತ ತಾಲೂಕಿನ ಮ್ಯಾಂಗೋ ಫಾರ್ಮ್ ಹೌಸ್ ಎದುರು ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 550 ಗ್ರಾಂ ತೂಕದ 15 ಸಾವಿರ ಮೌಲ್ಯದ ಒಣಗಿದ ಗಾಂಜಾವನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ.

ಈ ವೇಳೆ ವೇಳೆ ಖಚಿತ ಮಾಹಿತಿ ಪಡೆದ ಡಿವೈಎಸ್ಪಿ ಶ್ರೀಕಾಂತ ಕೆ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ್ ಗೋಪಾಲ್, ಪಿ.ಎಸ್.ಐ ಶ್ರೀಧರ್ ನಾಯ್ಕ, ಹಾಗೂ ಇನ್ನೋರ್ವ ಪಿ.ಎಸ್.ಐ ಮಯೂರ ಪಟ್ಟಣ ಶೆಟ್ಟಿ ದಾಳಿ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಾರವಾರದ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಂಜು ಗೊಂಡ ಹಾಗೂ ನಿಂಗನ ಗೌಡ ಪಾಟೀಲ್ ಉಪಸ್ಥಿತರಿದ್ದರು . ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾದಲ್ಲೂ ಇಬ್ಬರ ಬಂಧನ

ಕುಮಟಾ: ಇದೇ ವೇಳೆ ಗಾಂಜಾ ವ್ಯಾಪಾರಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಕುಮಟಾದಲ್ಲಿ ನಡೆದಿದೆ.. ಹೌದೂ..ಕುಮಟಾ ತಾಲೂಕಿನ ಮೂರುರು ರಸ್ತೆಯ ಸಿದ್ದನಬಾವಿ ಘಟ್ಟದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಮೇತ ಕುಮಟಾ ಪೊಲೀಸರು ಬಂಧಿಸಿದ್ದಾರೆ.ಮೂರೂರು ಅಂಗಡಿಕೇರಿ ನಿವಾಸಿ ಪ್ರಸಾದ ಹೊಸಳ್ಳಿ ಹಾಗೂ ಕಲ್ಲಬ್ಬೆಯ ಸುನೀಲ ಸತ್ಯನಾರಾಯಣ ಮುಕ್ರಿ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಅಂದಾಜು 10 ಸಾವಿರ ರೂ ಮೌಲ್ಯದ 230 ಗ್ರಾಂ ಗಾಂಜಾವನ್ನು ವಶಕಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ ಮತ್ತು ಯೋಗೀಶ್ ಮಡಿವಾಳ, ಕುಮಟಾ

Back to top button