ಚಿರತೆ ಕಾಟ: ಮೂರು ದಿನಗಳಲ್ಲಿ ಆರು ಜಾನುವಾರು ಬಲಿ

ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದ ಕೆಲವೆಡೆ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದ್ದು ಎರಡೂ ಮೂರು ದಿಗಳಲ್ಲಿ ದಿನಗಳಲ್ಲಿ ಆರು ಜಾನುವಾರುಗಳನ್ನು ಚಿರತೆ ಬಲಿ ಪಡೆಯುವ ಮೂಲಕ ಮತ್ತೆ ಜನರು ಆತಂಕದಲ್ಲಿ ಕಾಲ ಕಳೆಯುವಂತೆ ಮಾಡಿದೆ. ಕಳೆದೊಂದು ವಾರದಿಂದ ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಕಚ್ಚೆರಿಕೆ ಪ್ರದೇಶದಲ್ಲಿ ಚಿರತೆ ತಿರುಗಾಡುತ್ತಿದೆ ಎನ್ನಲಾಗಿದೆ. ಗಣಪ ಗೌಡ ಹಾಗೂ ಬೆಳ್ಳಗೌಡರಿಗೆ ಸೇರಿದ ತಲಾ 1 ಕರು, ಸುನೀಲ್ ಆಚಾರಿ ಹಾಗೂ ಬಾಬು ಹಳ್ಳೇರ್ ಅವರಿಗೆ ಸೇರಿದ ತಲಾ 2 ಜಾನುವಾರು ವನ್ನು ಚಿರತೆ ಕೊಂದುಹಾಕಿರುವ ಮಾಹಿತಿ ಲಭಿಸಿದೆ. ಎರಡು ಜಿಂಕೆಗಳನ್ನು ಸಹ ಕೊಂದಿದ್ದ ಚಿರತೆ ಮತ್ತೆ ಈ ಭಾಗದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತಿದ್ದು ಸ್ಥಳೀಯರಿಗೆ ಆತಂಕ ಎದುರಾಗಿದೆ. ಸಾಲ್ಕೋಡ್ ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ ಜಾನುವಾರು ಸಾವನ್ನಪ್ಪಿದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಬೊನ್ ಇಟ್ಟಿದ್ದಾರೆ.

ಈ ಹಿಂದೆ ಸಹ ಸಾಲ್ಕೋಡು ಗ್ರಾಮ ವ್ಯಾಪ್ತಿಯಲ್ಲಿ ಹಾಗೂ ಪಕ್ಕದ ಊರಾದ ಕೊಂಡಕುಳಿ, ಕೆರೆಮನೆ ಕೆಚ್ಚರಿಕೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಸ್ಥಳೀಯರೊರ್ವರ ಮನೆಯ ನಾಯಿಯ ಮೇಲೆಯು ದಾಳಿ ನಡೆಸಿತ್ತು. ಇದಲ್ಲದೇ ಹಸುಗಳ ಮೇಲೆ ಎರಗಿ ತಿಂದುಹಾಕಿತ್ತು. ಜಾನುವಾರು ಮಾತ್ರವಲ್ಲದೇ ಮನುಷ್ಯರ ಮೇಲು ದಾಳಿ ಮಾಡಿ,ಗಾಯ ನೋವು ಉಂಟು ಮಾಡಿತ್ತು. ಹೀಗಾಗಿ ಗ್ರಾಮದವರ ಆಗ್ರಹದ ಮೇಲೆ ಅರಣ್ಯ ಇಲಾಖೆ ಚಿರತೆ ಕಾರ್ಯಾಚರಣೆಗೆ ಇಳಿದಿದ್ದು ಬೋನ್ ಸಹ ಇಡಲಾಗಿತ್ತು.ಆದರೆ ಚಿರತೆ ಮಾತ್ರ ಸೆರೆ ಸಿಕ್ಕಿರಲಿಲ್ಲವಾಗಿತ್ತು. ಮತ್ತೆ ಚಿರತೆ ದಾಳಿ ಇದೇ ಗ್ರಾಮದಲ್ಲಿ ಪ್ರಾರಂಭವಾಗಿದ್ದು ರೈತರು ತಮ್ಮ ಜಾನುವಾರುಗಳನ್ನು ಕಳೆದುಕೊಳ್ಳುವಂತಾಗಿದೆ. ಜನರ ಮೈಮೇಲೆ ಎರಗುವ ಭಯವು ಕಾಡತೊಡಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version