Focus NewsImportant
Trending

51 ಪ್ರಕರಣಗಳಲ್ಲಿಯ ಗಾಂಜಾ, ಗಾಂಜಾ ಗಿಡ ನಾಶ: 11 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮಾದಕವಸ್ತು ಬೆಂಕಿಗೆ ಆಹುತಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿರುವ ಒಟ್ಟು 51 ಪ್ರಕರಣಗಳಲ್ಲಿಯ ಗಾಂಜಾ, ಗಾಂಜಾ ಗಿಡ, ಅಂದಾಜು ರೂ 11 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮಾದಕ ದ್ರವ್ಯವನ್ನು ಪೋಲೀಸ್ ವರಿಷ್ಠಾಧಿಕಾರಿ ವಿಷ್ಣು ವರ್ಧನ ಮಾರ್ಗದರ್ಶನದಲ್ಲಿ ಅಂಕೋಲಾದಲ್ಲಿ ನಾಶಪಡಿಸಲಾಯಿತು. ಜೂನ್ 24 ಮಾರ್ಚ್ 2023ರಂದು ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಕಛೇರಿ ವ್ಯಾಪ್ತಿಯ ಕಾರವಾರ, ಶಿರಸಿ, ದಾಂಡೇಲಿ ಮತ್ತು ಭಟ್ಕಳ ಸೇರಿ 4 ಉಪ ವಿಭಾಗಗಳ ವಿವಿಧ ಪೊಲಿಸ್ ಠಾಣೆಗಳಲ್ಲಿ ಒಟ್ಟೂ 51 ಬೇರೆ ಬೇರೆ ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು, ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನ ಘನ ತ್ಯಾಜ್ಯ ವಿಲೇವಾರಿ ಘಟಕದ ಅಗ್ನಿ ಸ್ಥಾವರದಲ್ಲಿ ಹಾಕಿ ಸುಟ್ಟು ನಾಶ ಪಡಿಸಲಾಯಿತು.

ನ್ಯಾಯಾಲಯದ ಆದೇಶದಂತೆ ಜಪ್ತಿ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು ನಾಶ ಪಡಿಸಲು ಜಿಲ್ಲಾ ಮಾದಕ ದ್ರವ್ಯ ವಿಲೇವಾರಿ ಸಮಿತಿ ಮುಂದೆ ಹಾಜರು ಪಡಿಸಿ, ವಿಲೇವಾರಿ ಮಾಡಲು ನ್ಯಾಯಾಲಯದ ಅನುಮತಿ ಪಡೆಯಲಾಗಿತ್ತು. ವಿವಿಧ ಠಾಣಾ ವ್ಯಾಪ್ತಿಯ ಒಟ್ಟು 50 ಗಾಂಜಾ ಕೇಸಿಗೆ ಸಂಬoಧಿಸಿದoತೆ ಸುಮಾರು 47 ಕೆ.ಜಿ 844 ಗ್ರಾಂ ಮತ್ತು 8ಮಿಲಿ ಗ್ರಾಂ ತೂಕದ ಗಾಂಜಾ ನಾಶಪಡಿಸಲಾಗಿದ್ದು ಇದರ ಅಂದಾಜು ಮೌಲ್ಯ 11, ಲಕ್ಷದ ಮೂರು ನೂರು ರೂ ಆಗಿರುತ್ತದೆ. ಪ್ರತ್ಯೇಕ ಇನ್ನೊಂದು ಪ್ರಕರಣಕ್ಕೆ ಸಂಬAಧಿಸಿದAತೆ 150 ಗಾಂಜಾ ಗಿಡಗಳನ್ನು ನಾಶಪಡಿಸಲಾಯಿತು.

ಇವುಗಳ ಅಂದಾಜು ಮೌಲ್ಯ ಐವತ್ತು ಸಾವಿರ ರೂಪಾಯಿ. ಒಟ್ಟಾರೆಯಾಗಿ 51 ಪ್ರಕರಣಗಳಿಂದ ಗಾಂಜಾ ಮತ್ತು ಗಾಂಜಾ ಗಿಡಗಳು ಸೇರಿ ಒಟ್ಟೂ ಅಂದಾಜು 11ಲಕ್ಷ 50 ಸಾವಿರದ 300 ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ನಾಶಪಡಿಸಲಾಯಿತು. ಎಸ್. ಪಿ ವಿಷ್ಣುವರ್ಧನ್ ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ಮಾಡಿದರು,ವಿಲೇವಾರಿ ಸಮಿತಿ ಸದಸ್ಯರು ಮತ್ತು ಪಂಚರ ಸಮಕ್ಷಮ ಗಾಂಜಾ ಮತ್ತು ಗಾಂಜಾ ಗಿಡಗಳನ್ನು ಅಗ್ನಿಯಲ್ಲಿ ದಹಿಸಿ ನಾಶ ಪಡಿಸಲಾಯಿತು. ಜಿಲ್ಲಾ ಅಪರಾಧ ಪತ್ತೆ ದಳದ ಡಿವೈಎಸ್ಪಿ ವಿಜಯಪ್ರಸಾದ್ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾತನಾಡಿ,ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಒಟ್ಟು 51 ಪ್ರಕರಣಗಳಲ್ಲಿಯ ಗಾಂಜಾ,ಮತ್ತು ಗಾಂಜಾ ಗಿಡದ ಪ್ರಮಾಣದ ಕುರಿತು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button