ನಿಲ್ಲಿಸಿಟ್ಟಿದ್ದ ಬೈಕುಗಳಿಗೆ ಓಮಿನಿ ಡಿಕ್ಕಿ: ಓರ್ವನಿಗೆ ಗಾಯ: ಮೂರು ಬೈಕ್ ಜಖಂ

ಸಿದ್ದಾಪುರ : ಸಾಗರ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಓಮ್ನಿ ಸಿದ್ದಾಪುರ ಪಟ್ಟಣದ ಭಗತ್ ಸಿಂಗ್ ಸರ್ಕಲ್ ಬಳಿ ನಿಲ್ಲಿಸಿಟ್ಟಿದ್ದ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮೂರು ಬೈಕ್ ಹಾಗೂ ಓಮಿನಿ ಜಕಮ್ ಗೊಂಡಿದ್ದು ರಸ್ತೆಯ ಅಂಚಿನಲ್ಲಿದ್ದ ಕಂಬಗಳು ಮುರಿದು ಬಿದ್ದಿವೆ.

ಘಟನೆಯಲ್ಲಿ ಓರ್ವನಿಗೆ ಗಾಯವಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಭವಹಿಸಲು ಕಾರಣ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ ಸಿದ್ದಾಪುರ

Exit mobile version