ಅಕ್ರಮವಾಗಿ ಸಾಗಾಟ: 11 ಜಾನುವಾರುಗಳ ರಕ್ಷಣೆ

ಹೊನ್ನಾವರ: ಯಾವುದೇ ಅನುಮತಿ ಹೊಂದಿರದೇ ಲಾರಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಹೊನ್ನಾವರ ಪೊಲೀಸರು ದಾಳಿ ನಡೆಸಿದ ಘಟನೆ ವರದಿಯಾಗಿದೆ. ತಾಲೂಕಿನ ಹಳದಿಪುರದ ರಾಷ್ಟ್ರೀಯ ಹೆದ್ದಾರಿ 66ರ ಅಗ್ರಹಾರ ಗಣಪತಿ ದೇವಸ್ಥಾನ ಎದುರಿಗೆ ವಾಹನ ಪತ್ತೆಯಾಗಿದೆ. ಬೈಂದೂರ ಕಡೆಯಿಂದ ಪೂಣಾ ಕಡೆಗೆ ಜಾನುವಾರು ಸಾಗಿಸುತ್ತಿದ್ದರು ಎನ್ನಲಾಗಿದೆ. ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟಮೆoಟಿನ ವ್ಯವಸ್ಥೆ ಮಾಡದೆ ಹಾಗೂ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ, ಹಿಂಸಾತ್ಮಕವಾಗಿ ತುಂಬಿಕೊoಡು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶಕ್ಕೆ, ಲಾರಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು. ಲಾರಿಯಲ್ಲಿ 4ಹಸು,7ಕರು ಇದ್ದು ಒಟ್ಟು 11 ಜಾನುವಾರುಗಳಿದ್ದವು.

ಧಾರವಾಡ ಜಿಲ್ಲೆಯ ರಾಜೀವ ಗಾಂಧೀ ನಗರ 2 ನೇ ಕ್ರಾಸ್ ನಿವಾಸಿ ವೃತ್ತಿಯಲ್ಲಿ ಚಾಲಕನಾಗಿರುವ ಸಂತೋಷ ಚಿದಾನಂದ ಮಂಟೂರ್, ಇನ್ನೊರ್ವ ಬೈಂದೂರು ತಾಲೂಕಿನ ಶಿರೂರು ನಿವಾಸಿ ಕೊರಿಯರ್ ಕೆಲಸ ನಿರ್ವಹಿಸುತ್ತಿರುವ ನಾಗರಾಜ ನರಸಿಂಹ ಮೋಗೇರ,ಧಾರವಾಡ ಜಿಲ್ಲೆಯ ಜೊಡ ಕ್ರಾಸ್ ನಿವಾಸಿ ಕ್ಲೀನರ್ ಕೆಲಸದಲ್ಲಿರುವ ಮಣಿಕಂಠ ಚಂದ್ರಶೇಖರ ದೇಸಾಯಿಪಟ್ಟಿ ಬಂಧಿತ ಆರೋಪಿಗಳು. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version