Follow Us On

WhatsApp Group
Important
Trending

ರಸ್ತೆಯಲ್ಲಿ ಹೊತ್ತಿ ಉರಿದ ಕಾರು: ಸುಟ್ಟು ಕರಕಲಾದ ಸ್ಕಾರ್ಪಿಯೋ

ಅಂಕೋಲಾ : ರಾ.ಹೆ 66 ರ ಅಂಕೋಲಾ ಕಾರವಾರ ಮಾರ್ಗ ಮಧ್ಯೆ ಹಾರವಾಡ ಘಟ್ಟದ ಪ್ರದೇಶದಲ್ಲಿ ಕಾರು ಒಂದು ಹೊತ್ತಿ ಉರಿದ ಘಟನೆ ಸಂಭವಿಸಿದ್ದು ಸ್ಥಳೀಯರಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ಗೋವಾ ನೊಂದಣಿ ಸಂಖ್ಯೆ ಹೊಂದಿರುವ ಸ್ಕಾರ್ಪಿಯೊ ಕಾರು ಇದು ಎನ್ನಲಾಗಿದ್ದು,ಕಾರಿನ ಯಾಂತ್ರಿಕ ದೋಷ ಇಲ್ಲವೇ ಇತರೆ ಕಾರಣಗಳಿಂದ ಹೊತ್ತಿ ಉರಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಕಿ ಆಕಸ್ಮಿಕದ ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು.ಈ ವೇಳೆವಾಗಲೇ ವಾಹನ ಸುಟ್ಟು ಕರಕಲಾಗಿದೆ,ಕಾರಿನಲ್ಲಿದ್ದ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದು,ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ. ಕಾರ್ ನಲ್ಲಿದ್ದ ವ್ಯಕ್ತಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಇಲ್ಲವೇ ಇನ್ನಿತರ ಕಾರಣಗಳಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ ದೂರು ದಾಖಲಾಗಿರಲಿಲ್ಲ ಎನ್ನಲಾಗಿದೆ.

ನಡುರಾತ್ರಿಯ ವೇಳೆ ಹೆದ್ದಾರಿ ಅಂಚಿನಲ್ಲಿ ನಡೆದ ಈ ಘಟನೆ ಚುನಾವಣಾ ಸಮಯವಾದ್ದರಿಂದ ಸ್ಥಳೀಯರಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾದಂತಿದ್ದು,ಘಟನೆಯ ಕುರಿತಂತೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಹಾಗೂ ನಿಖರ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button