Focus NewsImportant
Trending

ಹಿರಿಯ ಪತ್ರಕರ್ತ ಬಿ ಹೊನ್ನಪ್ಪ ವಿಧಿವಶ

ಅಂಕೋಲಾ : ಹಿರಿಯ ಪತ್ರಕರ್ತ, ಬರಹಗಾರ, ಜನಪದ ಗಾಯಕ ತಾಲೂಕಿನ ಭಾವಿಕೇರಿಯ ಬಿ. ಹೊನ್ನಪ್ಪ (87) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಹಲವು ವರ್ಷಗಳ ಕಾಲ ನುಡಿಜೇನು ಪತ್ರಿಕೆಯ ಸಂಪಾದಕರಾಗಿ ಪತ್ರಿಕಾ ಕ್ಷೇತ್ರಕ್ಕೆ ತಮ್ಮದೇ ಅದ ಕೊಡುಗೆ ನೀಡಿದ್ದ ಬಿ. ಹೊನ್ನಪ್ಪರವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು.

ಜನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.ತಮ್ಮ ನೇರ, ನಿಷ್ಠುರ ಮಾತು ಹಾಗೂ ಬರಹಗಳ ಮೂಲಕ ಸಾಹಿತ್ಯ ಮತ್ತು ಮಾದ್ಯಮ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದರು. ಬಹುಮುಖಿ ವ್ಯಕ್ತಿತ್ವದ ಬಿ. ಹೊನ್ನಪ್ಪರವರು ನಾಡಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳ ಗೌರವಗಳ ಜೊತೆಗೆ ಅಂಕೋಲಾ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೂ ಭಾಜನರಾಗಿದ್ದರು.

ಇವರ ಅಗಲುವಿಕೆ ಕನ್ನಡ ಸಾಹಿತ್ಯ ಹಾಗೂ ಮಾದ್ಯಮ ಕ್ಷೇತ್ರಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ. ಅಗಲಿದ ಹಿರಿಯ ಚೇತನ ಬಿ. ಹೊನ್ನಪ್ಪರವರ ಆತ್ಮಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button