Focus NewsImportant
Trending

ಹೆದ್ದಾರಿಯಲ್ಲಿ ಪಲ್ಟಿಯಾಗಿ ಮರಕ್ಕೆ ಗುದ್ದಿಕೊಂಡ ವಾಹನ :ಸ್ಥಳದಲ್ಲಿಯೇ ಮೃತಪಟ್ಟ ಚಾಲಕ

ಚೆಲ್ಲಪಿಲ್ಲಿಯಾದ ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣಿನ ಬಾಕ್ಸಗಳು

ಅಂಕೋಲಾ: ಮಹಾರಾಷ್ಟ್ರದ ಸಾಂಗ್ಲಿಯಿಂದ ಕೇರಳದ ಕೊಚ್ಚಿಗೆ  ಹಣ್ಣುಗಳನ್ನು ತುಂಬಿ ಸಾಗಿಸುತ್ತಿದ್ದ ಈಚರ್ ವಾಹನವೊಂದು ದಾರಿಮಧ್ಯೆ ಪಲ್ಟಿಯಾಗಿ,ಮರಕ್ಕೆ ಗುದ್ಧಿ ಕೊಂಡು,ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ರಾ.ಹೆ 63 ರ ಯಲ್ಲಾಪುರ – ಅಂಕೋಲಾ ಮಾರ್ಗಮಧ್ಯೆ  ಕೊಡ್ಲಗದ್ದೆ ಬಳಿ  ನಡೆದಿದೆ.           

ಸಾಂಗ್ಲಿಯಿಂದ ಕೇರಳಕ್ಕೆ ದಾಳಿಂಬೆ  ಮತ್ತು ದ್ರಾಕ್ಷಿ ಹಣ್ಣುಗಳನ್ನು ತುಂಬಿ ಸಾಗಿಸುತ್ತಿದ್ದ ಲಾರಿ,ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ , ಪಲ್ಪಿಯಾಗಿ ಹೆದ್ದಾರಿ ಅಂಚಿನ ಮರಕ್ಕೆ ಜೋರಾಗಿ ಗುದ್ದಿಕೊಂಡ ಪರಿಣಾಮ, ವಾಹನ ಸಂಪೂರ್ಣ ನುಜ್ಜು ಗುಜ್ಜಾಗಿದ್ದು,ವಾಹನದಲ್ಲಿದ್ದ ಹಣ್ಣಿನ ಬಾಕ್ಸುಗಳು ಚೆಲ್ಲಾಪಿಲ್ಲಿ ಯಾಗಿ ಬಿದ್ದಿದೆ. ಅಪಘಾತಗೊಂಡ ವಾಹನ ( MH 12 QW  3200 )ಹಾಗೂ ಮರದ ಮಧ್ಯೆ ಸಿಲುಕಿಕೊಂಡು ತೀವ್ರ ಗಾಯ ಹಾಗೂ  ರಕ್ತಸ್ರಾವದೊಂದಿಗೆ  ಸ್ಥಳದಲ್ಲೇ ಮೃತಪಟ್ಟ ಚಾಲಕನ ಮೃತ ದೇಹ ಹೊರತೆಗೆಯಲು ಕ್ರೇನ್ ಬಳಸಿ ಹರಸಾಹಸ ಪಡುವಂತಾಯಿತು. ಘಟನಾ ಸ್ಥಳದಿಂದ ಮೃತದೇಹವನ್ನು ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ  ಸಹಕರಿಸಿದರು.

ಗಾಯಾಳುವಾದ ಕ್ಲೀನರ್ ನನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಸಹಕರಿಸಿದರು. ಅಂಕೋಲಾ ಸಿಪಿಐ ಜಾಕ್ಸನ್ ಡಿಸೋಜ,ಪಿಎಸ್ಐ ಪ್ರೇಮನಗೌಡ ಪಾಟೀಲ್ ಸ್ಥಳ ಪರಿಶೀಲಿಸಿದರು.ಹೆದ್ದಾರಿ ಗಸ್ತು ವಾಹನ ಸಿಬ್ಬಂದಿ ಸಂತೋಷ ,ಪೋಲಿಸ್ ಸಿಬ್ಬಂದಿಗಳಾದ ಮನೋಜ್,ಸುಬ್ರಾಯ್ ಭಟ್ ಕರ್ತವ್ಯ ನಿರ್ವಹಿಸಿದರು.ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button