Join Our

WhatsApp Group
Important
Trending

ಸಿದ್ದಾಪುರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಚಿತ್ರನಟಿ ಶೃತಿ ಪ್ರಚಾರ

ಸಿದ್ದಾಪುರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರವಾಗಿ ಚಿತ್ರನಟಿ ಶೃತಿ ಪಟ್ಟಣದ ವಿವಿದೆಡೆ ರೋಡ್ ಶೋ ನಡೆಸಿದರು.

ನಟಿ ಶೃತಿ ಮಾತನಾಡಿ, ರಾಹುಲ್ ಗಾಂಧೀ ಮಾಡಿರುವುದು ಭಾರತ ಜೋಡೋ ಯಾತ್ರೆಯಲ್ಲ. ಭಾರತ ಚೋಡೋ ಯಾತ್ರೆಯಾಗಿದೆ. ಮೋದಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ. ಈ ಬಾರಿ ಕಾಗೇರಿಯವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಎಂದು ಕರೆ ನೀಡಿದರು.

ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮೋದಿ ಬಿರುಗಾಳಿಯಿಂದ ಬಿಜೆಪಿ ದಾಖಲೆಯ ಗೆಲುವು ಸಾಧಿಸಲಿದೆ. ಈ ಚುನಾವಣೆಯನ್ನು ಜವಾಬ್ದಾರಿಯಿಂದ ಎದುರಿಸುತ್ತಿದ್ದೇವೆ. ಮೇ 10 ರಂದು ಬಿಜೆಪಿಗೆ ಮತ ನೀಡಿ ಆಶೀರ್ವದಿಸಿ ಎಂದು ಕರೆ ನೀಡಿದರು.

ಸಿದ್ದಾಪುರ ಮಂಡಲಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಯಾಗಿದ್ದು, ವಿರೋಧಿಗಳು ಏನು ಅಭಿವೃದ್ಧಿಯಾಗಿಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.

ಈ ವೇಳೆ ಪ್ರಮುಖರಾದ ಶಶಿಭೂಷಣ ಹೆಗಡೆ, ಶೋಭಾ ನಾಯ್ಕ, ರವಿ ಹೆಗಡೆ ಹೂವಿನಮನೆ, ಸುಮನಾ ಕಾಮತ, ಭಾರತಿ ಹೆಗಡೆ ಉಪಸ್ಥಿತರಿದ್ದರು
ಪಟ್ಟಣದ ಗಂಗಾಂಬಿಕ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ ಶಿರಸಿ ಮುಖ್ಯ ರಸ್ತೆ ಮೂಲಕ ಚಂದ್ರಗುತ್ತಿ ಸರ್ಕಲ್ ಹೊಸ ಬಸ್ ನಿಲ್ದಾಣ ಸರ್ಕಲ್ ರಾಜ ಮಾರ್ಗ ಭಗತ್ ಸಿಂಗ್ ಸರ್ಕಲ್ ಮೂಲಕ ಸಾಗಿ ಎಸ್ ಬಿ ಐ ಸರ್ಕಲ್ ಬಳಿ ಸಭೆ ನಡೆಸಿದರು.

ವಿಸ್ಮಯ ನ್ಯೂಸ್ ಸಿದ್ದಾಪುರ

Back to top button