ಅಂಕೋಲಾ: ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ನೂಚನೆಯಂತೆ ವಾಯುಭಾರ ಕುಸಿತವಾದ ಹಿನ್ನಲೆಯಲ್ಲಿ (ಬಿಪೋರ್ ಚಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ) ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಕುರಿತು ಎಚ್ಚರಿಕೆ ಸಂದೇಶ ನೀಡಲಾಗಿತ್ತು,
ಇದೇ ವೇಳೆ ತಾಲೂಕಿನ ಬೆಳಂಬಾರ ಕಡಲ ತೀರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದಾಗಿ
ಆಳೆತ್ತರದ ಅಲೆಗಳು ಕಡಲ ತೀರಕ್ಕೆ ಬಂದು ಅಪ್ಪಳಿಸತೊಡಗಿದೆ. ತೀರಕ್ಕೆ ಹೊಂದಿಕೊಂಡಂತೆ ಹಲವು ಮೀನುಗಾರ ಕುಟುಂಬದವರ ಮನೆ ಮತ್ತಿತರ ಆಸ್ತಿ ಪಾಸ್ತಿಗಳಿದ್ದು,ಅಲೆಗಳ ಅಬ್ಬರ ಕಂಡು ಕೆಲವರು ಕಂಗಾಲಾಗಿದ್ದು,ಒಂದೊಮ್ಮೆ ರಾತ್ರಿ ವೇಳೆ ಅಲೆಗಳ ತೀವ್ರತೆ ಹೆಚ್ಚಾದರೆ ಬದುಕು ಕೊಚ್ಚಿ ಹೋಗುವ ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸಾಯಂಕಾಲದ ವೇಳೆಗೆ ಅಲೆಗಳ ಅಬ್ಬರ ಕಡಿಮೆಯಾಗಿದ್ದರೂ,
ಮುಂದಿನ 24 ಘಂಟೆಗಳಲ್ಲಿ ಭಾರೀ ಬಿರುಗಾಳಿ ಮಳೆ ಬೀಳುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಮೀನುಗಾರರು, ಪ್ರವಾಸಿಗರು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ,ತುರ್ತು ನಿರ್ವಹಣಾ ಕೇಂದ್ರ ತೆರೆಯಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ