Follow Us On

WhatsApp Group
Focus NewsImportant
Trending

ಇಲೆಕ್ಟ್ರಾನಿಕ್ಸ್ ಮಳಿಗೆಯ ಮೇಲ್ಮಹಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ: ಅಪಾರ ಹಾನಿ

ಅಂಕೋಲಾ : ಪಟ್ಟಣದ ಅಂಬಾರ ಕೋಡ್ಲ ರಸ್ತೆಗೆ ಹೊಂದಿಕೊಂಡಿರುವ ಪ್ರಸಿದ್ಧ ಮಂಜುಶ್ರೀ ಇಲೆಕ್ಟ್ರಾನಿಕ್ಸ್ ಮಳಿಗೆಯ ಮೇಲ್ಮಹಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ರವಿವಾರ ಮುಂಜಾನೆ ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆ  ಕಟ್ಟಡದಲ್ಲಿ (ಡಿ.ಟಿ ಎಚ್ ಮಳಿಗೆ) ಯಿಂದ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅಂಗಡಿ ಮಾಲಕ ಹಾಗೂ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುರಿದ ಭಾರೀ ಮಳೆ, ಗುಡುಗು – ಸಿಡಿಲಿನಿಂದ ಸಂಭವಿಸಿರಬಹುದಾದ  ವಿದ್ಯುತ್ ಶಾರ್ಟ ಸರ್ಕಿಟ್ ಇಲ್ಲವೇ ಬೇರೆ ಯಾವುದೋ ಕಾರಣಗಳಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಕೇಳಿಬಂದಿದೆ.ಬೆಂಕಿ ಅವಘಡದ ಕುರಿತಂತೆ ಹೆಚ್ಚಿನ  ಮಾಹಿತಿಗಳು ತಿಳಿದು ಬರಬೇಕಾಗಿದೆ.ಬೆಂಕಿ ಬಿದ್ದ ಕಟ್ಟಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಉಪಕರಣಗಳಿದ್ದು , ಫರ್ನಿಚರ ಸೇರಿ ಕೆಲ ಪ್ರಮಾಣದ ವಸ್ತುಗಳು  ಸುಟ್ಟು ಕರಕಲಾಗಿದ್ದು ಹಾನಿಯ ಅಂದಾಜು ತಿಳಿದು ಬರಬೇಕಿದೆ.

ಅಗ್ನಿಶಾಮಕ ದಳದವರು ಆಗಮಿಸುವ ಮುಂಚೆಯೇ ಸ್ಥಳೀಯರು ಹಾಗೂ ಅಕ್ಕಪಕ್ಕದ ಅಂಗಡಿಕಾರರು ಮತ್ತಿತರರು ಬೆಂಕಿ ನಂದಿಸಲು ಪ್ರಯತ್ನಿಸಿದರಲ್ಲದೇ, ಕೋಣೆಯಲ್ಲಿದ್ದ ವಸ್ತು ಹಾಗೂ ಗೃಹ ಉಪಯೋಗಿ ಇಲೆಕ್ಟ್ರಾನಿಕ ಉಪಕರಣಗಳನ್ನು ಹೊರ ಸಾಗಿಸಿ, ಸಂಭವನೀಯ ಹೆಚ್ಚಿನ ಹಾನಿ ತಪ್ಪಿಸಿದರು. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button