Focus NewsImportant
Trending

ಸ್ಟೇಷನರಿ ಮತ್ತು ತಂಪುಪಾನೀಯ ಅಂಗಡಿಗೆ ಬೆಂಕಿ: 50 ಲಕ್ಷಕ್ಕೂ ಅಧಿಕ ಹಾನಿ

ಹೊನ್ನಾವರ: ತಾಲೂಕಿನ ಕವಲಕ್ಕಿಯಲ್ಲಿ ಸ್ಟೇಷನರಿ ಮತ್ತು ತಂಪು ಪಾನೀಯ ಅಂಗಡಿಯೊoದಕ್ಕೆ ಬೆಂಕಿಬಿದ್ದ ಪರಿಣಾಮ, ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ರವಿವಾರ ಮದ್ಯರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, 5 ಕ್ಕಿಂತ ಹೆಚ್ಚು ಫ್ರಿಜ್, ಯಂತ್ರೋಪಕರಣ, ಸ್ಟೇಶನರಿ ಸಾಮಗ್ರಿ ಬೆಂಕಿಗೆ ಆಹುತಿಯಾಗಿದೆ. ಅಂದಾಜು 50 ಲಕ್ಷಕ್ಕಿಂತ ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ.

ಹಿರಿಯ ವರ್ತಕರಾದ ಕವಲಕ್ಕಿಯ ಎನ್. ಎಸ್. ಭಂಡಾರಿ ಮಾಲೀಕತ್ವದ ಅಂಗಡಿ ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಬಿದ್ದಿರುವ ಸಾಧ್ಯತೆಯಿದೆ. ಅಗ್ನಿ ಶಾಮಕ ವಾಹದಿಂದ ಅಕ್ಕಪಕ್ಕದ ಅಂಗಡಿಗೆ ಬೆಂಕಿ ತಗುಲದಂತೆ ಕಾರ್ಯಾಚರಣೆ ನಡೆಸಲಾಯಿತು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button