Follow Us On

WhatsApp Group
Focus News
Trending

ಶ್ರೀಚೆನ್ನಕೇಶವ ಪ್ರೌಢಶಾಲೆ ಕಕಿ೯ಯಲ್ಲಿ “ವಿಶ್ವಯೋಗ ದಿನಾಚರಣೆ

ಹೊನ್ನಾವರ: ದಿನಾಂಕ 21\6\2023 ರಂದು ಶ್ರೀಚೆನ್ನಕೇಶವ ಪ್ರೌಢಶಾಲೆ ಕಕಿ೯ಯಲ್ಲಿ “ವಿಶ್ವಯೋಗ ದಿನಾಚರಣೆಯನ್ನು ವಿಶೆಷವಾಗಿ ಆಚರಿಸಲಾಯಿತು.” ಶಾಲೆಯ ಪ್ರಾಥ೯ನಾ ಸಭೆಯಲ್ಲಿ ಸಾಮೂಹಿಕ ಯೋಗ ಪ್ರದಶ೯ನ ಹಮ್ಮಿಕೊಳ್ಳಲಾಯಿತ್ತು . ನಂತರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಭುವನ ಸುಂದರ , ಭೂಮಾಪನ ಅಧಿಕಾರಿಗಳು ಹೊನ್ನಾವರ ಇವರು ಮಾತನಾಡಿ ಭಗವಂತ ನೀಡಿದ ಆಯುಷ್ಯದ ಅವಧಿಯನ್ನು ಅಥ೯ಪೂಣ೯ವಾಗಿ ಬಳಸಿಕೊಳ್ಳುವಾಗ ಬುದ್ದಿ ಮತ್ತು ಮನಸ್ಸನ್ನು ಕೇಂದ್ರೀಕರಿಸಬೇಕು. ಅದಕ್ಕೆ ಸೂಕ್ತ ಮಾಗ೯ವೇ ʼ ಯೋಗ ʼ ಎಂದರು. ಯೋಗಮಾಡಿ ಆಯುಷ್ಯ ಆರೋಗ್ಯವನ್ನು ವೃದ್ದಿ ಮಾಡಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ನಿಧಾ೯ರ ತೆಗೆದು ಕೊಳ್ಳುವುದರಿಂದ ಯಶಸ್ವಿ ವ್ಯಕ್ತಿಯಾಗಿ ಉಜ್ಜಲ ಭವಿಷ್ಯ ಪಡೆಯುವಿರಿ ಎಂದು ಜೀವನದ ಪ್ರಾತ್ಯಕ್ಷಿಕ ನಿದಶ೯ನ ವನ್ನು ಕಥನದ ಮುಖೇನ ವಿದ್ಯಾಥಿ೯ಗಳಿಗೆ ತಿಳಿಸಿದರು .

ಕಾರ್ಯ ಕ್ರಮದ ಅಧ್ಯಕ್ಷರು ಶಾಲೆಯ ಮುಖ್ಯಾದ್ಯಾಪಕರಾದ ಶ್ರೀ ಎಲ್. ಎಂ. ಹೆಗಡೆ ಯವರು ಮಾತನಾಡಿ ಆಸನ , ಧ್ಯಾನ , ಪ್ರಾಣಯಾಮ , ಯೋಗದ ಈ ಪ್ರಕಾರಗಳನ್ನು ಪ್ರತಿನಿತ್ಯ ಅಳವಡಿಸಿಕೊಂಡಾಗ ದೇಹ, ವಿಚಾರ , ಮನಸ್ಸನ್ನು ಸದೃಢಗೊಳಿಸುತ್ತದೆ. ಶ್ರದ್ದೆ ಮತ್ತು ಆಸಕ್ತಿಯನ್ನು ಬೆಳಸಿಕೊಂಡು ಆರೋಗ್ಯಕ್ಕಾಗಿ ಯೋಗ ಮಾಡಿ ಎಂದು ಹೇಳಿದರು.

ಶ್ರೀಯುತ ಶ್ರೀಕಾಂತ ಹಿಟ್ನಳ್ಳಿಯವರು ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ನಾಯ್ಕರವರು ಪ್ರಸ್ತಾವಿಕವಾಗಿ ಮಾತನಾಡಿದರು. ಕು. ಧನ್ಯಾ ಸಂಗಡಿಗರು ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. ಕು. ಸಿಂಚನಾ ಆಚಾರಿ ಯೋಗಗೀತೆ ಪ್ರಸ್ತುತ ಪಡಿಸಿದಳು. ಶಾಲೆಯ ವಿದ್ಯಾಥಿಗಳಾದ ರೇಣುಕಾ ಮುಕ್ರಿ, ಕು. ಯೋಗರಾಜ ಕೊಡಿಯಾ, ಕು .ನಂದಿತಾ ನಾಯ್ಕ ಯೋಗಾಸನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು . ಶ್ರೀಮತಿ ಕವಿತಾ ನಾಯ್ಕ ವಂದಿಸಿದರು . ಶ್ರೀಮತಿ ಮುಕ್ತಾನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲ ಶಿಕ್ಷಕರು ಹಾಗೂವಿದ್ಯಾಥಿ೯ಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button