Focus NewsImportant
Trending

ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಚಾಲಕ: 20ಕ್ಕೂ ಹೆಚ್ಚು ಗೂಳಿಗಳ ರಕ್ಷಣೆ

ಹೊನ್ನಾವರ: ಕಂಟೇನರ್ ವಾಹನದಲ್ಲಿ ಹಿಂಸಾತ್ಮಕವಾಗಿ ಮಹಾರಾಷ್ಟ್ರ ದಿಂದ ಗೇರುಸೋಪ್ಪಾ-ಹೊನ್ನಾವರ ಮಾರ್ಗದ ಮೂಲಕ ಮಂಕಿ ಮತ್ತು ಭಟ್ಕಳಕ್ಕೆ ಸಾಗಿಸುತ್ತಿದ್ದ 20 ಕ್ಕೂ ಹೆಚ್ಚು ಗೂಳಿಯನ್ನು ಹೊನ್ನಾವರ ಪೋಲಿಸರು ರಕ್ಷಿಸಿದಾರೆ. ಮುಂಜಾನೆ ಗೇರುಸೋಪ್ಪಾ ಮಾರ್ಗದ ಮೂಲಕ ಹೊನ್ನಾವರಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಯನ್ನು ಖಚಿತ ಮಾಹಿಯ ಮೇರೆಗೆ ಹಡಿನಬಾಳ ಮತ್ತು ಕವಲಕ್ಕಿ ಮಧ್ಯದ ಹೆದ್ದಾರಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಹಡಿನಬಾಳ ಸಮೀಪ ಪೋಲಿಸರು ವಾಹನ ತಡೆದಿದ್ದು, ಲಾರಿ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದ. ಬೆನ್ನು ಬಿಡದೆ ಹಿಂಬಾಲಿಸಿ ಬಂದ ಹೊನ್ನಾವರ ಪೋಲಿಸರು ಹಡಿನಬಾಳ ಮತ್ತು ಕವಲಕ್ಕಿ ಮಧ್ಯದ ಹೆದ್ದಾರಿಯಲ್ಲಿ ಅಡ್ಡಗಟ್ಟಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

KEA Recruitment 2023: ಭರ್ಜರಿ ಉದ್ಯೋಗಾವಕಾಶ: 670 ಹುದ್ದೆಗಳಿಗೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಕಂಟೇನರಲ್ಲಿ ಸಮರ್ಪಕವಾಗಿ ಗಾಳಿ, ಆಹಾರದ ವ್ಯವಸ್ಥೆ ಕಲ್ಪಿಸದೇ ಯಾವುದೇ ಪಾಸ್ ಪರ್ಮೀಟ್ ಇಲ್ಲದೇ 22 ಹೋರಿಯನ್ನು ಸಾಗಿಸಲಾಗುತ್ತಿತ್ತು. ಅದರಲ್ಲಿ ಒಂದು ಹೋರಿಯು ಕಂಟೇನರ್ ಒಳಗೆ ಮೃತಪಟ್ಟಿತ್ತು. ಆರೋಪಿತರಲ್ಲಿ ಓರ್ವ ಹಾವೇರಿಯ ಹಾನಗಲ್ ಮೂಲದ ಇಸ್ಮಾಯಿಲ್ ಖಾದರ್ ಸಾಬ್ ಎಲವಟ್ಟಿ, ಮಹಾರಾಷ್ಟ್ರ ಭೂಷಣನಗರ ಮೂಲದ ಸಂಕೇತ ರಾಜೇಂದ್ರ ಬಲಿದ್ ಎಂದು ತಿಳಿದು ಬಂದಿದೆ. ಹಾವೇರಿಯಿಂದ ಗೋವನ್ನು ಭಟ್ಕಳ ಮತ್ತು ಮಂಕಿಗೆ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ಸಿಕ್ಕಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button