Follow Us On

WhatsApp Group
Focus NewsImportant
Trending

ಆಟೋದ ಮೇಲೆ ಬಿದ್ದ ಬೃಹತ್ ಮರ: ಸ್ವಲ್ಪದರಲ್ಲೇ ಚಾಲಕ ಪ್ರಾಣಾಪಾಯದಿಂದ ಪಾರು

ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಣ್ಣಿ ಮನೆಯ ಹತ್ತಿರದ ರಸ್ತೆಯಲ್ಲಿ ಆಟೋ ಚಲಾಯಿಸಿ ಕೊಂಡು ಹೋಗುತ್ತಿದ್ದಾಗ ಬ್ರಹತ್ ಗಾತ್ರದ ಮರ ಬಿದ್ದು ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಹಳಗೇರಿಯ ಶ್ರೀನಾಥ್ ಗೌಡ ತನ್ನ ಆಟೋ ರಿಕ್ಷಾವನ್ನು ಚಲಾಯಿಸಿ ಕೊಂಡು ಹೋಗುತ್ತಿದ್ದಾಗ, ದಿಡೀರ್ ಎಂದು ಒಣಗಿದ ದೂಪದ ಮರವೊಂದು ಆಟೋದ ಮೇಲೆ ಬಿದ್ದಿರುವುದರಿಂದ ಆಟೋದ ಹಿಂದುಗಡೆಯ ಭಾಗ ಸಂಪೂರ್ಣ ಜಖಮ್ ಆಗಿದೆ.

ಚಾಲಕ ಕೂದಲು ಎಳೆಯ ಅಂತರದಲ್ಲಿ ಸಣ್ಣ ಪುಟ್ಟ ಘಾಯದಿಂದ ಅಪಾಯದಿಂದ ಪಾರಾಗಿದ್ದಾನೆ. ಅದ್ರಷ್ಟ ವಸಾತ್ ಆಟೋ ರಿಕ್ಷಾದ ಹಿಂದಿನ ಸೀಟ್ ನಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಸಂಭವಿಸ ಬಹುದಾದ ಅಪಾಯ ತಪ್ಪಿದಂತಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button