Follow Us On

Google News
Big News
Trending

ದೇಶದ ಪ್ರಥಮ ಪ್ರಜೆಯಿಂದ ಪ್ರತಿಷ್ಠಿತ ಯುನಿರ್ವಸಿಟಿಯ ಗೌರವ ಡಾಕ್ಟರೇಟ್ ಪ್ರಧಾನ : ಪದ್ಮಶ್ರೀ ಡಾ. ತುಳಸಿ ಗೌಡರ ಹಿರಿಮೆಗೆ   ಮತ್ತೊಂದು ಡಾಕ್ಟರೇಟ್ ಗರಿಮೆ

ಅಂಕೋಲಾ: ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ತುಳಸಿ ಗೌಡ ಅವರಿಗೆ, ರಾಷ್ಟ್ರದ ಪ್ರಥಮ ಪ್ರಜೆ ಜುಲೈ 3 ಸೋಮವಾರ ಕರ್ನಾಟಕ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಇತ್ತೀಚೆಗೆಷ್ಟೇ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ಕೆಲವೇ ದಿನಗಳಲ್ಲಿ, ಕಲಬುರ್ಗಿಯ ಶ್ರೀಸತ್ಯಸಾಯಿಬಾಬಾ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವತಿಯಿಂದಲೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದ್ದು ಈ ಮೂಲಕ ವೃಕ್ಷ ಮಾತೆ, ವನದೇವತೆ ಎಂದೇ ಕರೆಯಿಸಿಕೊಳ್ಳುವ ಹೊನ್ನಳ್ಳಿ ತುಳಸಿ ಗೌಡ ಅವರಿಗೆ ತಿಂಗಳ ಅಂತರದಲ್ಲಿ ಡಬಲ್ ಡಾಕ್ಟರೇಟ್ ಗೌರವ ಅರಸಿ ಬಂದಂತಾಗಿದೆ. 

ಕಲಬುರ್ಗಿ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದ ಅದ್ದೂರಿ ಕಾರ್ಯಕ್ರಮ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಹಾಗೂ ಸಾಧನೆ ಮಾಡಿದ ದೇಶದ ಆರು ಜನ ಸಾಧಕರಿಗೆ ಗೌರವ ಡಾಕ್ಟರೇಟ್   ಪದವಿ ನೀಡಿ  ಗೌರವಿಸಲಾಗಿದೆ.ಅಂಥವರ ಸಾಲಿನಲ್ಲಿ  ಪದ್ಮಶ್ರೀ ಡಾ.ತುಳಸಿ ಗೌಡ ಅವರೂ ಒಬ್ಬರಾಗಿದ್ದು, ಹಿರಿಯಜ್ಜಿಯ ಜೀವನ ಇತರರಿಗೂ ಮಾದರಿ. 

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮಾ ವಿವಿಧ ಕ್ಷೇತ್ರದ ಸಾಧಕರಿಗೆ ಪದವಿ ಪ್ರಧಾನ ಮಾಡಿ, ಅವರ ಸಾಧನೆ ಹಾಗೂ ಸೇವೆಯನ್ನು ಪ್ರಶಂಸಿದರು.ರಾಜ್ಯದ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ವಿಶ್ವ ವಿದ್ಯಾಲಯದ ಸಂಸ್ಥಾಪಕ ಸದ್ಗುರು ಮಧುಸೂಧನ ಸಾಯಿ, ಕುಲಪತಿ ಬಿ.ಎನ್. ನರಸಿಂಹಮೂರ್ತಿ, ಉಪ ಕುಲಪತಿ ಡಾ.ಶ್ರೀಕಾಂತ ಮೂರ್ತಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಅಂಕೋಲಾ ತಾಲೂಕಿನ ಪದ್ಮಶ್ರೀ ತುಳಸಜ್ಜಿ ಇವರನ್ನು ಹಸಿರೀಕರಣ ಮತ್ತು ಸಮಾಜ ಸೇವೆಗಾಗಿ ಗುರುತಿಸಿ, ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಇನ್ನುಳಿದಂತೆ 

ವಿಜ್ಞಾನ ಮತ್ತು ತಂತ್ರಜ್ಞಾನದ ಸೇವೆಗಾಗಿ ಪ್ರೊ.ಅಜಯ ಸೂದ್, ಕ್ರೀಡಾ ಕ್ಷೇತ್ರದಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಪುಲ್ಲೇಲ ಗೋಪಿಚಂದ, ಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಗಾಯಕ ಆರ್. ಆರ್. ಪದ್ಮನಾಭ, ಆರೋಗ್ಯ ಸೇವೆಗೆ ನಿಮಾನ್ಸ್ ನ ನರ ವಿಜ್ಞಾನ ತಜ್ಞೆ ಡಾ.ಪ್ರತಿಮಾ ಮೂರ್ತಿ, ಶೈಕ್ಷಣಿಕ ಸೇವೆಗೆ ವಾರಣಾಸಿಯ ವಿಜಯಶಂಕರ ಶುಕ್ಲಾ ಗೌರವ ಡಾಕ್ಟರೇಟ್ ಸ್ಟೀಕರಿಸಿದ್ದಾರೆ. ಜುಲೈ 1 ರಿಂದ ಒಂದು ವಾರಗಳ ಕಾಲ ರಾಜ್ಯದಲ್ಲಿ ನನ್ನ ಗಿಡ ನನ್ನ ಹೆಮ್ಮೆ ಎಂಬ ಘೋಷವಾಕ್ಯದಡಿ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿಯೇ ವೃಕ್ಷ ಮಾತೆ ತುಳಸಿ ಗೌಡರ ಹಸರೀಕರಣ ಕಾರ್ಯಕ್ಕೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದಕ್ಕೆ , ರಾಜ್ಯದ ಪರಿಸರ ರಾಯಭಾರಿ , ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಸೇರಿದಂತೆ ಹಲವು ಗಣ್ಯರು ಹರ್ಷ ವ್ಯಕ್ತಪಡಿಸಿ, ತುಳಸಿ ಗೌಡ ಅವರನ್ನು ಅಭಿನಂದಿಸಿದ್ದಾರೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button