Focus News
Trending

ಕೆಸರು ಗದ್ದೆಯಂತಾದ ರಸ್ತೆ – ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಲು ರೋಗಿಗಳ ಪರದಾಟ – ಸಾರ್ವಜನಿಕರ ಆಕ್ರೋಶ

ಸಿದ್ದಾಪುರ: ತಾಲೂಕಿನ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆ ಕೆಸರುಗದ್ದೆಯಂತಾಗಿದ್ದು, ರಸ್ತೆಯಲ್ಲಿ ರೋಗಿಗಳು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರ ನಿರ್ಲಕ್ಷದ ಬಗ್ಗೆ ಸಾರ್ವಜನಿಕರು ಆರೋಪ ಮಾಡಿದ್ದಾರೆ. ರಸ್ತೆ ದುರಸ್ಥಿ ಕಾರ್ಯ ಅರ್ಧಂಬರ್ದ ವಾಗಿದ್ದು ಈ ರೀತಿ ಆಗಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಮಳೆಗಾಲ ಆರಂಭವಾಗುತ್ತದೆ ಎಂದು ತಿಳಿದಿದ್ದರು ಸಹ ಗುತ್ತಿಗೆದಾರ ಜವಾಬ್ದಾರಿ ವಹಿಸದೆ ಈ ರೀತಿಯ ಅಪೂರ್ಣ ಕಾಮಗಾರಿ ಮಾಡಿದ್ದಾರೆ. ಅಲ್ಲದೆ ರೋಗಿಗಳಿಗೆ ಓಡಾಡಲು ಪರ್ಯಾಯ ವ್ಯವಸ್ಥೆ ಮಾರ್ಗ ಕಲ್ಪಿಸಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ರೋಗಿಗಳಿಗೆ ಆಸ್ಪತ್ರೆಗೆ ಓಡಾಡಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಗಳು ಕೇಳಿ ಬಂದಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button