Important
Trending

ಬಸ್ಸಿನ ಕೆಳಗಡೆ ಸಿಕ್ಕಿ ಜಖಂಗೊoಡ ಬೈಕ್: ಆಶ್ಚರ್ಯಕರ ರೀತಿಯಲ್ಲಿ ಬೈಕ್ ಸವಾರ ಅಪಾಯದಿಂದ ಪಾರು

ಹೊನ್ನಾವರ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದ ಎಲ್.ಐ.ಸಿ ಕ್ರಾಸ್ ಸಮೀಪ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಸ್ ಡಿವೈಡರ್ ಮೇಲೆ ನಿಂತಿದ್ದು, ಬಸ್ಸಿನ ಕೆಳಗಡೆ ಬೈಕ್ ಸಿಲುಕಿದೆ. ಕುಮಟಾ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ಸಂದೇಶ ನಾಯ್ಕ ಅವರು, ಎಲ್.ಐ.ಸಿ ಕ್ರಾಸ್ ಸಮೀಪ ಯೂಟರ್ನ್ ಮಾಡುವಾಗ ಹಿಂಬದಿಯಿoದ ಬರುತ್ತಿದ್ದ ಕುಮಟಾ ಡಿಪೋ ಸೇರಿದ ಶಿರಸಿ- ಭಟ್ಕಳ ಬಸ್, ಬೈಕ್‌ಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಯದಿಂದ ಪಾರಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬೈಕ್ ಸಂಪೂರ್ಣ ಜಖಂ ಆಗಿದ್ದು, ಬಸ್ ನ ಬಲ ಭಾಗಕ್ಕೆ ಹಾನಿಯಾಗಿದೆ. ಈ ಸಂಭoದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button